ಕಾಸರಗೋಡು ಜಿಲ್ಲೆಯಲ್ಲಿ ಹಲವರಿಗೆ ಹೆಪಟೈಟಿಸ್ - ರೋಗ ತಡೆಗಟ್ಟಲು ಉನ್ನತ ಮಟ್ಟದ ಸಭೆ.

Coastal Bulletin
ಕಾಸರಗೋಡು ಜಿಲ್ಲೆಯಲ್ಲಿ ಹಲವರಿಗೆ ಹೆಪಟೈಟಿಸ್ - ರೋಗ ತಡೆಗಟ್ಟಲು ಉನ್ನತ ಮಟ್ಟದ ಸಭೆ.

ಕಾಸರಗೋಡು: ಜಿಲ್ಲೆಯ ಪೈವಳಿಕೆ, ಮೀಂಜ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಹೆಪಟೈಟಿಸ್‌ “ಎ’ ವರದಿಯಾದ ಹಿನ್ನೆಲೆಯಲ್ಲಿ ಜನರು ಜಾಗ್ರತೆ ವಹಿಸಬೇಕೆಂದು ಜಿಲ್ಲಾ ಮೆಡಿಕಲ್‌ ಆಫೀಸರ್‌ (ಆರೋಗ್ಯ) ಡಾ| ಎ.ವಿ.ರಾಮದಾಸ್‌ ಕರೆ ನೀಡಿದ್ದಾರೆ

ಪ್ರಸ್ತುತ ಪೈವಳಿಕೆ ಪಂಚಾಯತ್‌ ವ್ಯಾಪ್ತಿಯಲ್ಲಿ 39 ಮಂದಿಗೆ ಹಾಗೂ ಮೀಂಜ ಗ್ರಾ. ಪಂ. ವ್ಯಾಪ್ತಿಯಲ್ಲಿ 15 ಮಂದಿಗೆ ಹೆಪಟೈಟಿಸ್‌ “ಎ’ ವರದಿಯಾಗಿದೆ.

ಹೆಪಟೈಟಿಸ್ ವೈರಸ್ ಹೆಚ್ಚು ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಈ ವೈರಸ್ ಸೋಂಕಿಗೆ ಒಳಗಾದಾಗ ಅನೇಕ ಬಾರಿ ಯಾವುದೇ ರೋಗಲಕ್ಷಣಗಳು ಕಂಡು ಬರುವುದಿಲ್ಲ. ಕಣ್ಣುಗಳು

ಮತ್ತು ಚರ್ಮದ ಹಳದಿ ಬಣ್ಣ, ಕಪ್ಪು ಮೂತ್ರ, ಹೊಟ್ಟೆ ನೋವು, ಹಸಿವಿನ ಕೊರತೆ, ಜ್ವರ, ವಾಕರಿಕೆ, ಸುಸ್ತು ಮತ್ತು ಅತಿಸಾರ ಉಂಟಾಗುತ್ತದೆ.

ರೋಗ ಹರಡುವುದನ್ನು ತಡೆಯಲು ಪ್ರತಿರೋಧ ನಿಯಂತ್ರಣ ಕಾರ್ಯವನ್ನು ತೀವ್ರಗೊಳಿಸಲಾಗಿದೆ. ಸ್ಥಿತಿಗತಿಯನ್ನು ಅಧ್ಯಯನ ಮಾಡಲು ಶಾಸಕರು, ಆರೋಗ್ಯ ಕಾರ್ಯಕರ್ತರು ಮೊದಲಾದವರ ಸಭೆ ನಡೆಸಲಾಗಿದೆ.

Leave a Comment