ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ ಮಾಡಿದ ಆರೋಪಿಯ ಬಂಧನ.

Coastal Bulletin
ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ ಮಾಡಿದ ಆರೋಪಿಯ ಬಂಧನ.

ಉಡುಪಿ: ದೀಪಾವಳಿ ಹಬ್ಬದಂದು ಬೆಳ್ಳಂಬೆಳಗ್ಗೆ ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರನ್ನು ಹತ್ಯೆಗೈದು ಇಡೀ ರಾಜ್ಯವೇ ಬೆಚ್ಚಿ ಬೀಳಿಸುವಂತಹ ಕುಕೃತ್ಯವನ್ನು ಎಸಗಿದ್ದ ಆರೋಪಿಯನ್ನು ಕರ್ನಾಟಕ ಪೊಲೀಸರು ಬೆಳಗಾವಿಯಲ್ಲಿ ಅರೆಸ್ಟ್‌ ಮಾಡಿದ್ದಾರೆ.

ಉಡುಪಿಯ ಮನೆಯೊಂದಕ್ಕೆ ನುಗ್ಗಿ ಒಂದೇ ಕುಟುಂಬದ ನಾಲ್ವರನ್ನು ಕೇವಲ 10 ನಿಮಿಷದಲ್ಲಿ ಕೊಲೆ ಮಾಡಿ ಪರಾರಿ ಆಗಿದ್ದನು. ಈತನ ಬೆನ್ನು ಬಿದ್ದಿದ್ದ ಆರೋಪಿಯ ಹೆಸರು ಪ್ರವೀಣ ಚೌಗಲೇ (35) ಎಂದು ಗುರುತಿಸಲಾಗಿದೆ. ಈತ ಪೊಲೀಸರಿಂದ ಕಳೆದ ಎರಡು ದಿನಗಳಿಂದ ಪೊಲೀಸರ ಕಣ್ತಪ್ಪಿಸಿ ಓಡಾಡುತ್ತಿದ್ದನು. ಇಂದು ಮಧ್ಯಾಹ್ನ ಬೆಳಗಾವಿ

ಮಾರ್ಗವಾಗಿ ಮಹಾರಾಷ್ಟ್ರ ಇಲ್ಲವೇ ಆಂಧ್ರಕ್ಕೆ ತೆರಳಲು ಹಂತಕ ಪ್ಲ್ಯಾನ್ ಮಾಡಿಕೊಂಡಿದ್ದನು. ಪೊಲೀಸರು ಆತನ ಟೆಕ್ನಿಕಲ್ ಎವಿಡನ್ಸ್ ಆಧರಿಸಿ ಖೆಡ್ಡಾಕ್ಕೆ ಕೆಡವಿದ್ದಾರೆ. ಕೊಲೆ ಮಾಡಿ ಊರೂರು ಮೇಲೆ ಸಿಕ್ಕಿಬಿದ್ದ ಆರೋಪಿಯನ್ನು ಬಂಧಿಸಿ ಉಡುಪಿಗೆ ಕರೆತರಲಾಗುತ್ತಿದೆ.

ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.ಮೃತರನ್ನು ಹಸೀನಾ(46),ಅಫ್ನಾನ್(23),ಅಯ್ನಾಝ್(21) ಹಾಗೂ ಆಸಿಂ(12)  ಎಂದು ಗುರುತಿಸಲಾಗಿದೆ.

Leave a Comment