ಅಭಿವೃದ್ಧಿಯತ್ತ ಸಾಗುತ್ತಿರುವ ಫರಂಗಿಪೇಟೆಗೆ ಪಾರ್ಕಿಂಗ್ ಎಂಬುದೇ ಕಪ್ಪು ಚುಕ್ಕೆ ಸಾಲು ಸಾಲು ಕಟ್ಟಡಗಳು ನಿರ್ಮಾಣವಾದರೂ ಎಲ್ಲಿಯೂ ಪಾರ್ಕಿಂಗ್ ವ್ಯವಸ್ಥೆ ಇಲ್ಲ

ಯಾದವ ಕುಲಾಲ್ ಬಿ ಸಿ ರೋಡ್.
ಅಭಿವೃದ್ಧಿಯತ್ತ ಸಾಗುತ್ತಿರುವ ಫರಂಗಿಪೇಟೆಗೆ ಪಾರ್ಕಿಂಗ್ ಎಂಬುದೇ ಕಪ್ಪು ಚುಕ್ಕೆ ಸಾಲು ಸಾಲು ಕಟ್ಟಡಗಳು ನಿರ್ಮಾಣವಾದರೂ ಎಲ್ಲಿಯೂ ಪಾರ್ಕಿಂಗ್ ವ್ಯವಸ್ಥೆ ಇಲ್ಲ

ಬಿ.ಸಿ.ರೋಡ್ : ಮಂಗಳೂರು ತಾಲೂಕು ಮತ್ತು ಬಂಟ್ವಾಳ ತಾಲೂಕುಗಳ ಮಧ್ಯದಲ್ಲಿರುವ ಒಂದು ಊರು ಫರಂಗಿಪೇಟೆ. ಇದು ಪುದು ಗ್ರಾಮದ ಪ್ರಮುಖ ನಗರವಾಗಿದೆ. ಪುಟ್ಟ ಪುಟ್ಟ ಗೂಡಂಗಡಿಗಳನ್ನು ಹೊಂದಿದ್ದ ಈ ಊರು ಈಗ ದೊಡ್ಡ ಪಟ್ಟಣವಾಗಿ ಬೆಳೆದಿದೆ. ರಾಷ್ಟ್ರೀಯ ಬ್ಯಾಂಕ್‌ಗಳು, ಡಿಲಕ್ಸ್ ಹೊಟೇಲ್‌ಗಳು, ಸೂಪರ್ ಮಾರ್ಕೆಟ್, ದೊಡ್ಡ ದೊಡ್ಡ ವಸತಿ ಗೃಹಗಳಿಂದ ಕೂಡಿದ್ದು, ಇನ್ನಷ್ಟು ಶ್ರೀಮಂತ ನಗರವಾಗಿ ಬೆಳೆಯುವುದರಲ್ಲಿ ಎರಡು ಮಾತಿಲ್ಲ. ಪುಟ್ಟ ಕಟ್ಟಡಗಳು ನಾಲ್ಕೈದು ಮಳಿಗೆಯ ಕಟ್ಟಡವಾಗಿ ಬೆಳೆದಿದೆ. ಆದರೆ ಯಾವುದೇ ಕಟ್ಟಡಗಳಲ್ಲಿ ಪಾರ್ಕಿಂಗ್‌ಗೆ ಸ್ಥಳ ಎಂಬುದೇ ಇಲ್ಲ. ಫರಂಗಿಪೇಟೆಯ ಪೇಟೆಯ ಮಧ್ಯದಲ್ಲಿಯೇ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದ್ದು, ಹೆದ್ದಾರಿ ಸುತ್ತಲೂ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಿ ಸಂಚಾರಕ್ಕೆ ಸಮಸ್ಯೆಯನ್ನು ತಂದೊಡ್ಡಿರುವ ದೃಶ್ಯ ಕಂಡು ಬರುತ್ತದೆ.

ಫರಂಗಿಪೇಟೆ ನಗರದಲ್ಲಿ ಹಳೆ ರಸ್ತೆ ಪುದು ಪಂಚಾಯತ್ ಕಚೇರಿ ಬಳಿ ಸುತ್ತಲೂ ಸಾಲು ಸಾಲು ಕಟ್ಟಡಗಳು ನಿರ್ಮಾಣವಾಗಿದೆ. ಯಾವುದೇ ಕಟ್ಟಡಗಳಲ್ಲಿಯೂ ವಾಹನ ನಿಲುಗಡೆಗೆ ಇಲ್ಲಿ ಸ್ಥಳವೇ ಇಲ್ಲ. ಅಂಗಡಿಗೆ ಬರುವ ಗ್ರಾಹಕರು ರಸ್ತೆಯಲ್ಲೇ ವಾಹನ ನಿಲುಗಡೆ ಮಾಡಬೇಕು.


ಫರಂಗಿಪೇಟೆ ಮುಖ್ಯ ರಸ್ತೆಯ ಒಂದು ಬದಿಯಲ್ಲಿ ಸಾಲು ಸಾಲಾಗಿ ಅಂಗಡಿಗಳ ಮಧ್ಯದಲ್ಲಿ ಬಸ್ಸು ಪ್ರಯಾಣಿಕರಿಗೆ ತಂಗುದಾಣ ಇದೆ. ಇದರ ಬದಿಯಲ್ಲೇ ರಿಕ್ಷಾ ನಿಲ್ದಾಣ. ಇದರ ಎದುರುಗಡೆ ರಸ್ತೆ ಬದಿಗೆ ತಾಗಿಯೇ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಇದ್ದು, ಇಲ್ಲಿ ಕೆಲವು ಬೈಕ್‌ಗಳಿಗೆ ಮಾತ್ರ ನಿಲುಗಡೆಗೆ ಅವಕಾಶ ಇರುವುದು. ಆದರೆ ಘನವಾಹನಗಳು ರಸ್ತೆಯಲ್ಲೇ ನಿಲುಗಡೆ ಮಾಡುವ

ಕಾರಣ,

ಪ್ರಯಾಣಿಕರ ತಂಗುದಾಣದ ಬಳಿ ಬಸ್‌ಬೇ ಇಲ್ಲದ ಕಾರಣ ಬಸ್ಸುಗಳು ಹೆದ್ದಾರಿ ರಸ್ತೆಂiiಲ್ಲೇ ನಿಲುಗಡೆ ಮಾಡಿ ಪ್ರಯಾಣಿಕರನ್ನು ಹತ್ತಿಸುವ ಸ್ಥಿತಿ ಎದುರಾಗಿದೆ. ಸುತ್ತಲೂ ಪಾರ್ಕಿಂಗ್ ವಲಯವಾಗಿ ಪರಿಣಮಿಸಿದೆ.

************

ಫರಂಗಿಪೇಟೆ ಅಭಿವೃದ್ಧಿಯ ನಗರವಾಗಿ ಬದಲಾವಣೆಯಾಗುತ್ತಾ ಇದೆ. ಹಲವಾರು ವಸತಿ ನಿಲಯಗಳು ನಿರ್ಮಾಣವಾಗಿದೆ. ಇದರಿಂದಾಗಿ ಫರಂಗಿಪೇಟೆ ನಗರದಲ್ಲಿ ಜನಸಂಖ್ಯೆ ಹೆಚ್ಚಾಗಿದೆ. ಆದರೆ ಸಾಲು ಸಾಲು ಕಟ್ಟಡಗಳು ನಿರ್ಮಾಣವಾದರೂ ಎಲ್ಲಿಯೂ ವಾಹನ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಇದರಿಂದ ಸಾರ್ವಜನಿಕರಿಗೆ ನಡೆದುಕೊಂಡು ಹೋಗುವುದು ತುಂಬಾ ಕಷ್ಟವಾಗಿದೆ. ಆದ್ದರಿಂದ ಆದಷ್ಟೂ ಬೇಗ ಈ ಪ್ರದೇಶದಲ್ಲಿ ನಗರದಲ್ಲಿ ಒಂದು ಒಳ್ಳೆಯ ಪಾರ್ಕಿಂಗ್ ಏರಿಯ ಆಗಲಿ ಎಂಬುದೇ ನಮ್ಮ ಆಶಯ.

- ರಮೇಶ್ ಫರಂಗಿಪೇಟೆ

Leave a Comment