ಬಂಟ್ವಾಳ :ರಾಧ ಸುರಭಿ ಗೋಮಂದಿರದಲ್ಲಿ ನ 14 ರಿಂದ 22ತನಕ ಅಷ್ಟೋತ್ತರ ಶತ (108) ಶ್ರೀ ಮದ್ಭಾಗವತ ಕಥಾ ಪಾರಾಯಣ ಸಪ್ತಾಹ, ಮಹಾಯಜ್ಞ ಮತ್ತು ಗೋ ನವರಾತ್ರಿ ಉತ್ಸವ ಹಾಗೂ 1108 ನಾರಾಯಣ ಕವಚ ಯಾಗ ನಡೆಯಲಿದೆ,ಪೂರ್ವಭಾವಿಯಾಗಿ ನ 14, ಅಪರಾಹ್ನ 3 ಗಂಟೆಗೆ ಫರಂಗಿಪೇಟೆಯಿಂದ ಬೃಹತ್ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಶ್ರೀ ರಾಧಾಸುರಭಿ ಗೋ ಮಂದಿರಕ್ಕೆ ಆಗಮಿಸಲಿದೆ.ಎಂದು ಸಪ್ತಾಹ ಸಮಿತಿಯ ಕಾರ್ಯಧ್ಯಕ್ಷ ಟಿ ತಾರಾನಾಥ ಕೊಟ್ಟಾರಿ ಹೇಳಿದರು.
ಅವರು ಶ್ರೀ ರಾಧ ಸುರಭಿ ಗೋಮಂದಿರ ರಾಷ್ಟ್ರೀಯ ಗೋಸೇವಾ ಟ್ರಸ್ಟ್ ಬ್ರಹ್ಮಗಿರಿ, ಗೋವಿನತೋಟ ಪುದು ಹಾಗೂ ಗೋಸೇವಾ ಗತಿವಿಧಿ ,ಕರ್ನಾಟಕ ಇದರ ಸಂಯುಕ್ತ ಆಶ್ರಯದಲ್ಲಿ ಶ್ರೀ ಭಕ್ತಿ ಭೂಷಣ್ ಪ್ರಭುಜಿ ನೇತೃತ್ವದಲ್ಲಿ ನಡೆಯುವ ಅಷ್ಟೋತ್ತರ ಶತ (108) ಶ್ರೀ ಮದ್ಭಾಗವತ ಕಥಾ ಪಾರಾಯಣ ಸಪ್ತಾಹ, ಮಹಾಯಜ್ಞ ಮತ್ತು ಗೋ ನವರಾತ್ರಿ ಉತ್ಸವದ ಪ್ರಯುಕ್ತ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಧರ್ಮ, ರಾಷ್ಟ, ಗೋ ರಕ್ಷಣೆ ಹಾಗೂ ದೇಸಿ ಗೋ ತಳಿಗಳ ಸಂರಕ್ಷಣೆ, ಉತ್ಪನ್ನಗಳ ಬಳಕೆಗಾಗಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಉತ್ತರ ಭಾರತದ ಅರ್ಚಕ ವೃಂದದ ಸಹಾಭಾಗೀತ್ವದಲ್ಲಿ ಶ್ರೀ ಮದ್ಭಾಗವತ ಕಥಾ ಪಾರಾಯಣ ಮಹಾಯಜ್ಞ ಹಾಗೂ ನಾರಾಯಣ ಕವಚ ಯಾಗ ನಡೆಯಲಿದೆ ಎಂದರು.
ಭಕ್ತಿಭೂಷಣ್
ದಾಸ್ ಪ್ರಭುಜಿ ಮಾತನಾಡಿ,ಮಹಾ ಯಜ್ಞದಲ್ಲಿ ವಿಶೇಷ ವಾದ 3ಪ್ರಕಾರದ ಔಷದಿಯು ಉತ್ಪತ್ತಿಯಾಗುತ್ತದೆ ಅದಕ್ಕೆ ಎಲ್ಲಾ ವರ್ಗದ ಜನರ ಮಾನಸಿಕ ಹಾಗೂ ದೈಹಿಕ ಕಷ್ಟಗಳನ್ನು ದೂರ ಮಾಡುವ ವಿಶೇಷ ಗುಣ ಇದೆ. ಆದ್ದರಿಂದ ಎಲ್ಲರೂ ಈ ಧರ್ಮ ಕಾರ್ಯದಲ್ಲಿ ಭಾಗವಹಿಸಿ ಎಂದು ಹೇಳಿದರು.
ಸಮಿತಿಯ ಅಧ್ಯಕ್ಷರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ ದಕ್ಷಿಣ ಭಾರತದಲ್ಲೇ ಪ್ರಥಮ ಬಾರಿಗೆ ನಡೆಯುವ ಈ ಮಹಾ ಯಜ್ಞದಲ್ಲಿ ಎಲ್ಲರೂ ಭಾಗವಹಿಸಸುವಂತೆ ಸಹಕಾರ ಕೋರಿದರು.
ಈ ಸಂದರ್ಭದಲ್ಲಿ ಶ್ರೀ ಮದ್ಭಾಗವತ ಕಥಾ ಪಾರಾಯಣ ಸಪ್ತಾಹ ಸಮಿತಿಯ ಕೋಶಾಧಿಕಾರಿ ಪದ್ಮನಾಭ ಶೆಟ್ಟಿ ಪುಂಚಮೆ, ಪ್ರ. ಕಾರ್ಯದರ್ಶಿ ದಾಮೋದರ ನೆತ್ತರಕೆರೆ, ಗಣೇಶ ಸುವರ್ಣ ತುಂಬೆ,ವಿನಯ ಕಡೆಗೋಳಿ, ಜಯಶ್ರೀ ಕರ್ಕೇರ, ದಿನೇಶ ಶೆಟ್ಟಿ ಕೊಟ್ಟಿಂಜ ಮತ್ತಿತರರು ಉಪಸ್ಥಿತರಿದ್ದರು.














