Coastal Bulletin

ಕೋವಿಡ್ ಹಾಗೂ ಒಮಿಕ್ರಾನ್ ಹೆಚ್ಚುತ್ತಿರುವುದರಿಂದ ಕೇರಳದಲ್ಲಿ ಒಂದರಿಂದ ಒಂಭತ್ತನೇ ತರಗತಿ ವರೆಗೆ ಶಾಲೆಗಳನ್ನು ಜ.21ರಿಂದ ಮುಚ್ಚಲು ರಾಜ್ಯ ಸರಕಾರವು ತೀರ್ಮಾನಿಸಿದೆ.

1ರಿಂದ 9ನೇ ತರಗತಿ ತನಕ ಇನ್ನು ಮುಂದೆ  ಆನ್ ಲೈನ್ ತರಗತಿ ಮುಂದುವರಿಯಲ್ಲಿದ್ದು,10ರಿಂದ 12ನೇ ತರಗತಿ ವರೆಗೆ ಕೋವಿಡ್ ನಿಯಮಗಳನ್ನು ಪಾಲಿಸಿ ಶಾಲಾ ತರಗತಿಗಳನ್ನು ನಡೆಸಲು ತೀರ್ಮಾನಿಸಲಾಗಿದೆ. 

ತಜ್ಞರ ಸಲಹೆಯಂತೆ ಶಾಲೆಗಳನ್ನು ಮುಚ್ಚುವ

ತೀರ್ಮಾನಕ್ಕೆ ಬರಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಶಿಕ್ಷಣ ಖಾತೆ ಸಚಿವ ವಿ.ಶಿವನ್ ಕುಟ್ಟಿ , ಆರೋಗ್ಯ ಇಲಾಖೆ ಸಚಿವೆ ವೀಣಾ ಜೋರ್ಜ್ ಹಾಗೂ ವಿವಿಧ ಇಲಾಖೆಗಳ ಉನ್ನತ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Leave a Comment