ಕೇರಳ ರಾಜ್ಯಪಾಲರ ಮೇಲೆ ಹಲ್ಲೆ ಯತ್ನ- ಮುಖ್ಯಮಂತ್ರಿ ಪಿಣರಾಯಿ ವಿಜಯ್ ಕುಮ್ಮಕ್ಕಿನಿಂದ ಹಲ್ಲೆ ಯತ್ನ ನಡೆದಿದೆ, ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಗಂಭೀರ ಆರೋಪ.

Coastal Bulletin
ಕೇರಳ ರಾಜ್ಯಪಾಲರ ಮೇಲೆ ಹಲ್ಲೆ ಯತ್ನ- ಮುಖ್ಯಮಂತ್ರಿ ಪಿಣರಾಯಿ ವಿಜಯ್ ಕುಮ್ಮಕ್ಕಿನಿಂದ ಹಲ್ಲೆ ಯತ್ನ ನಡೆದಿದೆ, ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಗಂಭೀರ ಆರೋಪ.

ಕೇರಳ: ಕೇರಳ ರಾಜ್ಯಪಾಲರ ಮೇಲೆ ಎಸ್ ಎಫ್ ಐ ಸದಸ್ಯರು ದಾಳಿ ನಡೆಸಲು ಪ್ರಯತ್ನಿಸಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ. ದೆಹಲಿಗೆ ಪ್ರಯಾಣಿಸುವುದಕ್ಕಾಗಿ ತಿರುವಂನಂತಪುರಂ ಏಪೋರ್ಟ್​ಗೆ ತೆರಳುತ್ತಿದ್ದ ವೇಳೆ ಗರ್ವನರ್​​ ಆರಿಫ್​ ಮೊಹಮ್ಮದ್​​​ ಖಾನ್​​ ಮೇಲೆ ಕೆಲ ಗೂಂಡಾಗಳು ಏಕಾಏಕಿ ಬಂದು ದಾಳಿ ನಡೆಸಲು ಮುಂದಾಗಿದ್ದರು.

ಘಟನೆಯ ಬಳಿಕ ತೀವ್ರ ಆಕ್ರೋಶಗೊಂಡ ಆರಿಫ್​ ಮೊಹಮ್ಮದ್​​​, ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತನ್ನ ಮೇಲೆ ದೈಹಿಕ ಹಲ್ಲೆ ನಡೆಸಲು ಈ ರೀತಿ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಘಟನೆಯು ಆಕಸ್ಮಿಕವಲ್ಲ.

ಬದಲಾಗಿ ಉದ್ದೇಶಪೂರ್ವಕವಾಗಿ ನನ್ನನ್ನೇ ಗುರಿಯಾಗಿಸಿಕೊಂಡು ನಡೆದ ಕೃತ್ಯ.ನಾನು ಸ್ಪಷ್ಟವಾಗಿ ಹೇಳುತ್ತಿದ್ದೇನೆ, ಇದು ಮುಖ್ಯಮಂತ್ರಿಗಳ ಕೆಲಸ. ನನ್ನ ವಿರುದ್ಧ ಪಿತೂರಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಕೇರಳದಲ್ಲಿ ಸಾಂವಿಧಾನಿಕ ಯಂತ್ರ ಕುಸಿದಂತೆ ಕಾಣಿಸುತ್ತಿದೆ ಎಂದೂ ರಾಜ್ಯಪಾಲರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Comment