'ಅಭಿನಯ ಶಾರದೆ' ಎಂದೇ ಖ್ಯಾತರಾಗಿದ್ದ ಕನ್ನಡದ ಹಿರಿಯ ನಟಿ ಜಯಂತಿ (76) ಅವರು ಇಂದು ವಿಧಿವಶರಾಗಿದ್ದಾರೆ. ಹಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಅಭಿನಯ ಶಾರದೆ ಎಂದೇ ಕರೆಸಿಕೊಳ್ಳುತ್ತಿದ್ದ ನಟಿ ಜಯಂತಿಯವರು ಕನ್ನಡ ಸೇರಿದಂತೆ ತೆಲಗು, ತಮಿಳು, ಮಲಯಾಳಂ, ಹಿಂದಿ ಮತ್ತು ಮರಾಠಿ ಸೇರಿದಂತೆ 500 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.ಇವರು ಕನ್ನಡದ
ಜೇನು ಗೂಡು, ರಾಮಾಂಜನೇಯ ಯುದ್ಧ, ತುಂಬಿದ ಕೊಡ, ಇಮ್ಮಡಿ ಪುಲಕೇಶಿ, ರೌಡಿ ರಂಗಣ್ಣ, ಬಾಳು ಬೆಳಗಿತು, ಬಾಳಿನ ಗುರಿ, ಶಿವಕೊಟ್ಟ ಸೌಭಾಗ್ಯ ಸೇರಿದಂತೆ ಹಲವು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿ ಕನ್ನಡ ಚಿತ್ರ ಪ್ರೇಮಿಗಳ ಮನಸೂರೆಗೊಂಡಿದ್ದರು.















