ಮಂಗಳೂರು : ಹಿರಿಯ ಪತ್ರಕರ್ತ, ರಂಗಭೂಮಿ ಕಲಾವಿದ ನವೀನ್ ಚಂದ್ರ ಪಾಲ್ (93) ಜೂ. 5ರಂದು ಶನಿವಾರ ನಿಧನ ಹೊಂದಿದರು. ಮೃತರು ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಮಂಗಳೂರು, ಜೂ. 6: ಹಿರಿಯ ಪತ್ರಕರ್ತ, ರಂಗಭೂಮಿ ಕಲಾವಿದ ನವೀನ್ ಚಂದ್ರ ಪಾಲ್ (93) ಜೂ. 5ರಂದು ಶನಿವಾರ ನಿಧನ ಹೊಂದಿದರು.
ಪತ್ರಿಕೋದ್ಯಮದ ಡಿಪ್ಲೊಮಾದ ಸಾಧನೆಗಾಗಿ ಚಿನ್ನದ ಪದಕವನ್ನು ಪಡೆದಿದ್ದ ಇವರು ಸಮಾಜವಾದಿ ಚಿಂತನೆಯ ಪ್ರತಿಪಾದಕರಾಗಿದ್ದರು.
1948 ರಲ್ಲಿ ಸಂಗಾತಿ ಪಾಕ್ಷಿಕ ಪತ್ರಿಕೆಯನ್ನು
ಪ್ರಾರಂಭಿಸಿ ಬಳಿಕ 1950 ರಲ್ಲಿ ವಾರಪತ್ರಿಕೆಯಾಗಿ ಮಾರ್ಪಾಡಿಸಿದ್ದರು. ಅರುಣೋದಯ ಪತ್ರಿಕೆಯ ಸಂಪಾದಕರಾಗಿದ್ದ ಇವರು ಮುಂಬಯಿಯಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್ ದೈನಿಕದ ಸಂಪರ್ಕಾಧಿಕಾರಿ, ಸೀನಿಯರ್ ಎಕ್ಸಿಕ್ಯೂಟಿವ್, ಎನ್ಲೈಟ್ ವಾರಪತ್ರಿಕೆಯಲ್ಲಿ ಅಸಿಸ್ಟೆಂಟ್ ಎಡಿಟರ್, ಕಾಮರ್ಸ್ ವಾರಪತ್ರಿಕೆಯ ಅಸಿಸ್ಟೆಂಟ್ ಎಡಿಟರ್ ಆಗಿ ಸೇವೆ ಸಲ್ಲಿಸಿದ್ದರು.















