ಬರ್ಲಿನ್: ಕಳೆದ 6 ತಿಂಗಳಿನಿಂದ ತಾಲಿಬಾನ್ ಆಡಳಿತದಲ್ಲಿ ಅಷ್ಘಾನಿಸ್ತಾನದ ಸ್ಥಿತಿ ಚಿಂತಾಜನಕವಾಗಿದೆ.ಅಲ್ಲಿಯ ಜನರು ಬದುಕಲು ಜನರು ತಮ್ಮ ಮಕ್ಕಳು ಮತ್ತು ಕಿಡ್ನಿಯನ್ನು ಮಾರಲು ಮುಂದಾಗಿದ್ದಾರೆ.
ಈ ವಿಷಯವಾಗಿ ಮಾಹಿತಿ ನೀಡಿರುವ ವಿಶ್ವ ಆಹಾರ ಯೋಜನೆ ಮುಖ್ಯಸ್ಥ ಡೇವಿಡ್ ಬಾಸ್ಲಿ ,ಜನರು ಬರಗಾಲ, ಕೊವೀಡ್ ಇನ್ನಿತರ ವಿಷಯದಲ್ಲಿ ಅಷ್ಘಾನಿಸ್ತಾನದ ಸ್ಥಿತಿ ಅತ್ಯಂತ
ಗಂಭೀರವಾಗಿದೆ. ಹೀಗೆ ಮುಂದುವರಿದರೆ, ದೇಶದ ಶೇ.97ರಷ್ಟು ಜನ ಬಡತನ ರೇಖೆಗಿಂತ ಕೆಳಗೆ ಇಳಿಯಲಿದ್ದಾರೆ.ಆದ್ದರಿಂದ ತಕ್ಷಣವೇ ಅಂತರಾಷ್ಟ್ರೀಯ ಸಮುದಾಯ ಇವರ ನೆರವಿಗೆ ಬರುವುದು ಒಳ್ಳೆಯದು " ಎಂದಿದ್ದಾರೆ.














