ಫರಂಗಿಪೇಟೆ :ಅಪಾಯಕಾರಿ ಹೊಂಡಗಳಿಂದ ಮುಕ್ತಿ.

Coastal Bulletin
ಫರಂಗಿಪೇಟೆ :ಅಪಾಯಕಾರಿ ಹೊಂಡಗಳಿಂದ ಮುಕ್ತಿ.

ಬಂಟ್ವಾಳ :ಪುದು ಗ್ರಾ ಪಂ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಫರಂಗಿಪೇಟೆಯ ಜಂಕ್ಷನ್ ನಲ್ಲಿ ಅಪಾಯಕಾರಿಯಾಗಿ ಪರಿಣಮಿಸಿದ ಹಲವಾರು ದೊಡ್ಡ ಹೊಂಡಗಳಿಗೆ ಕೊನೆಗೂ ಮುಕ್ತಿ ಸಿಕ್ಕಿದೆ,ಇದೀಗ ತೇಪೆ ಕಾರ್ಯ ನಡೆಯುತ್ತಿದ್ದು ಸಂಭಾವ್ಯ ಅನಾಹುತ ತಪ್ಪಿದಂತಾಗಿದೆ.


ವಾಹನ ಸವಾರರಿಗೆ ಸಮಸ್ಯೆಯಾಗಿ ಕಾಡುತಿದ್ದ  ಹಲವು ಸಣ್ಣ ಪುಟ್ಟ ವಾಹನ ಅಪಘಾತಗಳಿಗೂ ಕಾರಣವಾಗಿದ್ದ ಹೆದ್ದಾರಿಯ ಗುಂಡಿ ಮುಚ್ಚಲು ಸಾರ್ವಜನಿಕರ ಆಗ್ರಹ ಕೇಳಿ ಬಂದ ಹಿನ್ನಲೆಯಲ್ಲಿ ಪುದು ಗ್ರಾ ಪಂ ಅಧ್ಯಕ್ಷ ರಮ್ಲಾನ್ ಮಾರಿಪಲ್ಲ ಹಾಗೂ ಮಾಜಿ ಜಿ ಪಂ ಸದಸ್ಯ ಮಹಮ್ಮದ್ ಫಾರೂಕ್ ಫೋನ್ ಮುಖಂತರ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ ನವೀನ್ ರನ್ನು ಸಂಪರ್ಕಿಸಿ ಸಮಸ್ಯೆಯ ಬಗ್ಗೆ ತಿಳಿಸಿದಾಗ ತಕ್ಷಣ ಸ್ಪಂದಿಸಿದ ಅವರು ಗುತ್ತಿಗೆದಾರರಾದ

ಮುಗ್ರೋಡಿ ಕನ್ಸ್ಟ್ರಕ್ಷನ್ ಗೆ ತಿಳಿಸಿ ಇದೀಗ ಗುಂಡಿ ಮುಚ್ಚುವ ಕಾರ್ಯಕ್ಕೆ ಚಾಲನೆ ನೀಡಿಲಾಗಿದ್ದು ವಾಹನ ಸವಾರರು ನಿಟ್ಟುಸಿರು ಬಿಡುವಂತಾಗಿದೆ.

ತೇಪೆ ಕಾರ್ಯ ಈ ಸಂದರ್ಭದಲ್ಲಿ ಗ್ರಾ ಪಂ ಅಧ್ಯಕ್ಷ ರಮ್ಲಾನ್ ಮಾರಿಪಲ್ಲ, ಸದಸ್ಯರಾದ  ಮಹಮ್ಮದ್ ಮೋನು, ಇಸಮ್ ಫರಂಗಿಪೇಟೆ, ಇಕ್ಬಾಲ್ ಪಾಡಿ ಮತ್ತಿತರರು ಇದ್ದರು.

ಸಮಸ್ಯೆಗೆ  ತಕ್ಷಣ ಸ್ಪಂದಿಸಿದ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ ನವೀನ್ ಹಾಗೂ ಗುತ್ತಿಗೆದಾರರಾದ ಮುಗ್ರೋಡಿ ಕನ್ಸ್ಟ್ರಕ್ಷನ್ ಗೆ ಪುದು ಗ್ರಾ ಪಂ ಅಧ್ಯಕ್ಷ ರಮ್ಲಾನ್ ಮಾರಿಪಲ್ಲ,ಮಾಧ್ಯಮದ ಮೂಲಕ ಧನ್ಯವಾದ ತಿಳಿಸಿದ್ದಾರೆ

Leave a Comment