ಹಿಜ್ಬುಲ್ ಉಗ್ರರ ಮೇಲೆ ಇಸ್ರೇಲ್ ರಹಸ್ಯ ದಾಳಿ; ಸಾವಿರಾರು ಉಗ್ರರ ಶರ್ಟ್‌ ಕಿಸೆಯಲ್ಲಿದ್ದ ಪೇಜರ್ ಏಕಾಏಕಿ ಸ್ಫೋಟ!

Coastal Bulletin
ಹಿಜ್ಬುಲ್ ಉಗ್ರರ ಮೇಲೆ ಇಸ್ರೇಲ್ ರಹಸ್ಯ ದಾಳಿ; ಸಾವಿರಾರು ಉಗ್ರರ ಶರ್ಟ್‌ ಕಿಸೆಯಲ್ಲಿದ್ದ ಪೇಜರ್ ಏಕಾಏಕಿ ಸ್ಫೋಟ!

ನವದೆಹಲಿ: ಲೆಬನಾನ್ ಮೂಲದ ಉಗ್ರಗಾಮಿ ಗುಂಪು ಹೆಜ್ಬೊಲ್ಲಾದೊಂದಿಗೆ ಸಂಪರ್ಕ ಹೊಂದಿದ್ದ ಸಂವಹನ ವಾಹಕ ‘ಪೇಜರ್’ಗಳು ಸ್ಫೋಟಗೊಂಡ (Exploding Pager) ಪರಿಣಾಮ ಕನಿಷ್ಠ 10 ಮಂದಿ ಸಾವನ್ನಪ್ಪಿದ್ದು, 1000 ಸಾವಿರಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿರುವ ಘಟನೆ ವರದಿಯಾಗಿದೆ.

ಈ ಘಟನೆಯಲ್ಲಿ 1,000ಕ್ಕೂ ಹೆಚ್ಚು ಲೆಬನಾನ್ ಪರ ಹೋರಾಟಗಾರರು ಮತ್ತು ವೈದ್ಯರು ಗಂಭೀರವಾಗಿ ಗಾಯಗೊಂಡಿದ್ದು, ಅವರು ಸಂವಹನ ಮಾಡಲು ಬಳಸುತ್ತಿದ್ದ ಪೇಜರ್‌ಗಳು ಇದ್ದಕ್ಕಿದ್ದಂತೆ ಸ್ಫೋಟಗೊಂಡಿವೆ. ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಯುದ್ಧವು ಭುಗಿಲೆದ್ದ ನಂತರ ನಡೆದ ಅತಿದೊಡ್ಡ ‘ಭದ್ರತಾ ಉಲ್ಲಂಘನೆ’ ಇದು ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.

ಅತ್ಯಾಧುನಿಕ ತಂತ್ರಜ್ಞಾನದ ಬಳಕೆಯ ಮೂಲಕ ಪೇಜರ್‌ಗಳನ್ನು ಸ್ಫೋಟ ಮಾಡಲಾಗಿದ್ದು, ಸ್ಫೋಟ ನಡೆದ ತಕ್ಷಣ ನೂರಾರು ಮಂದಿ ಗಾಯಗೊಂಡಿದ್ದಾರೆ. ನಂತರ ಗಾಯಗೊಂಡ ಜನರನ್ನು ರಾಜಧಾನಿ ಬೈರುತ್‌ನ ದಕ್ಷಿಣ ಉಪನಗರಗಳ ಮೂಲಕ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆ (ಎನ್‌ಎನ್‌ಎ) ವರದಿ ಮಾಡಿದೆ.

ಸ್ಫೋಟದ ವೇಳೆ ಗಾಯಗೊಂಡವರಲ್ಲಿ ಹಿಜ್ಬುಲ್ಲಾ ಹೋರಾಟಗಾರರು ಮತ್ತು ಆರೋಗ್ಯ ಕಾರ್ಯಕರ್ತರು ಸೇರಿದ್ದಾರೆ. ಈ ಭೀಕರ ಘಟನೆಯಲ್ಲಿ

ಇರಾನ್ ರಾಯಭಾರಿ ಮೊಜಿತ್ಬಾ ಅಮಾನಿ ಕೂಡ ಗಾಯಗೊಂಡಿದ್ದಾರೆ ಎಂದು ಇರಾನ್‌ನ ಮೆಹರ್ ಸುದ್ದಿ ಸಂಸ್ಥೆ ಮಾಹಿತಿ ನೀಡಿದೆ.

ನಿನ್ನೆ ಮಧ್ಯಾಹ್ನ ನಡೆದ ಘಟನೆಯಲ್ಲಿ ನೂರಾರು ಹೆಜ್ಬೊಲ್ಲಾ ಹೋರಾಟಗಾರರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಲೆಬನಾನ್ ಮಾಹಿತಿ ನೀಡಿದೆ. ಆದರೆ, ಈ ಸ್ಫೋಟದಲ್ಲಿ ಮೃತಪಟ್ಟವರ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಸಂವಹನಕ್ಕಾಗಿ ಬಳಸುತ್ತಿದ್ದ ಪೇಜರ್‌ಗಳನ್ನು ಏಕಕಾಲದಲ್ಲಿ ಸ್ಫೋಟ ಮಾಡಲಾಗಿದೆ.

ದಕ್ಷಿಣ ಲೆಬನಾನ್ ಮತ್ತು ರಾಜಧಾನಿ ಬೈರುತ್ ಸೇರಿದಂತೆ ಹಲವು ಸ್ಥಳಗಳಲ್ಲಿ ಈ ಸರಣಿ ಸ್ಫೋಟ ಸಂಭವಿಸಿದೆ, ಇದು ಹಿಜ್ಬುಲ್ಲಾ ಇತಿಹಾಸದಲ್ಲೇ ಅತಿದೊಡ್ಡ ಗುಪ್ತಚರ ಲೋಪವಾಗಿದೆ. ಸ್ಥಳೀಯ ಕಾಲಮಾನ ಮಧ್ಯಾಹ್ನ 3.45ಕ್ಕೆ ಸ್ಫೋಟ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಒಂದರ ಹಿಂದೆ ಒಂದರಂತೆ ಹಲವಾರು ಸ್ಫೋಟಗಳು ನಡೆದಿದ್ದು, ಒಂದು ಗಂಟೆ ಕಾಲ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

Leave a Comment