Coastal Bulletin

ವಿದ್ಯಾರ್ಥಿಯೊಬ್ಬನಿಗೆ ರ್ಯಾಗಿಂಗ್ ಮಾಡಿ, ಕಿರುಕುಳ ನೀಡಿದ ಆರೋಪದಲ್ಲಿ ಆರು ಮಂದಿ ವಿದ್ಯಾರ್ಥಿಗಳನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ.ಶ್ರೀಲಾಲ್, ಶಾಹಿದ್, ಅಮೃದ್, ಜುರೈಜ್, ಹುಸೈನ್ ಮತ್ತು ಲಿಮ್ಸ್ ಬಂದಿತ ಆರೋಪಿಗಳು.ಬಂಧಿತರು ಇಂದಿರಾ ನರ್ಸಿಂಗ್ ಕಾಲೇಜಿನ 2ನೇ ವರ್ಷದ ಬಿಎಸ್ಪಿ ವಿದ್ಯಾರ್ಥಿಗಳು.

ದೂರುದಾರ ಕೇರಳ ಮೂಲದ ಮ್ಯಾನುಯಲ್ ಬಾಬು ಅತ್ತಾವರದ ಫ್ಲಾಟ್ ಒಂದರಲ್ಲಿ ವಾಸವಿದ್ದು, ಜುಲೈ 14ರಂದು ರಾತ್ರಿ 8 ಗಂಟೆಗೆ ಫಳೀರಿನ ಹೊಟೇಲ್ ಒಂದಕ್ಕೆ ತೆರಳಿದ್ದ.ಆ ಸಂದರ್ಭದಲ್ಲಿ  ಸೀನಿಯರ್ ವಿದ್ಯಾರ್ಥಿಗಳಾಗಿರುವ ಶ್ರೀಲಾಲ್ ಮತ್ತು ಆತನ ಸ್ನೇಹಿತರು ಬಂದು ರಾಗಿಂಗ್ ಮಾಡಿದ್ದಾರೆ. ಏಯ್, ನಾನು ಕಾಲೇಜಿನಲ್ಲಿ ಸೀನಿಯರ್ ಇದ್ದೀನಿ. ನಾವು ಬರುವಾಗ ನೀನು ಎದ್ದು ನಿಂತು ರೆಸ್ಪೆಕ್ಟ್ ಕೊಡಬೇಕು, ಏನ್ ಮುಖ ನೋಡ್ತೀಯಾ ಎಂದು ದಬಾಯಿಸಿದ್ದಾರೆ.

ಅಷ್ಟಕ್ಕೇ ಸುಮ್ಮನಾಗದ ಆರೋಪಿಗಳು ರಾತ್ರಿ 10 ಗಂಟೆ ವೇಳೆಗೆ ಮ್ಯಾನುಯಲ್ ಬಾಬು ಫ್ಲಾಟಿಗೆ ನುಗ್ಗಿ ಅಲ್ಲಿಯೂ ಅದೇ ರೀತಿ ರಾಗಿಂಗ್ ಮಾಡಿ,

ಕಿರುಕುಳ ನೀಡಿದ್ದಾರೆ. ನಾವು ಸೀನಿಯರ್.ನಾವು ಬರುವಾಗ ನೀನು ತಲೆತಗ್ಗಿಸಿ ಕುಳಿತುಕೊಳ್ಳಬೇಕು. ನಾವು ಹೇಳಿದಂತೆ ಕೇಳಬೇಕು ಎಂದು ಹೇಳಿದ್ದಲ್ಲದೆ, ಶರ್ಟ್ ಬಿಚ್ಚಿಸಿ ಚಡ್ಡಿಯಲ್ಲಿ ನಿಲ್ಲಿಸಿದ್ದಾರೆ. ಬಳಿಕ ಪದೇ ಪದೇ ಕುಳಿತುಕೊಳ್ಳಲು ಮತ್ತು ನಿಂತುಕೊಳ್ಳಲು ಹೇಳಿದ್ದು ಕೇಳದೇ ಇದ್ದುದಕ್ಕೆ ಶ್ರೀಲಾಲ್ ಮತ್ತು ಲಿಮ್ಸ್ ಎಂಬವರು ಸೇರಿ ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ. ಅಲ್ಲದೆ, ನೀನು ಕಾಲೇಜಿಗೆ ಬರುವಾಗಲೂ ನಮ್ಮನ್ನು ನೋಡಿ ತಲೆ ಅಡಿಗೆ ಹಾಕ್ಕೊಂಡು ಹೋಗಬೇಕು. ಇಲ್ಲದೇ ಇದ್ದಲ್ಲಿ ಕೊಲೆ ಮಾಡುತ್ತೇನೆ ಎಂದು ಜೀವ ಬೆದರಿಕೆ ಒಡ್ಡಿದ್ದರು ಎಂದು ಮ್ಯಾನುವಲ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾನೆ.

Leave a Comment