Coastal Bulletin

ಭಾರತದಲ್ಲಿ ನಡೆಯಬೇಕಿದ್ದ ಟಿ20 ಕ್ರಿಕೆಟ್‌ ವಿಶ್ವಕಪ್‌ ಪಂದ್ಯಾವಳಿಯನ್ನು ಕೋವಿಡ್ ಕಾರಣದಿಂದ ಯುಎಇಗೆ ನಡೆಯಲಿದೆ.ತವರು ನೆಲದಲ್ಲಿ ಪಂದ್ಯ ನಡೆಯುತ್ತದೆ ಎಂದು ಆಸೆಯಿಂದ ಇದ್ದ ಕ್ರಿಕೆಟ್​ ಪ್ರೇಮಿಗಳಿಗೆ ಇದು ಕೊಂಚ ನಿರಾಸೆಯಾಗಿದೆ.ಇದೀಗ ಟಿ-20 ವಿಶ್ವಕಪ್‌ನ ಗ್ರೂಪ್ ಪ್ರಕಟಿಸಲಾಗಿದ್ದು ಭಾರತ ಗ್ರೂಪ್ 2ರಲ್ಲಿ ಸ್ಥಾನದಲ್ಲಿದೆ. ಭಾರತದ ಜೊತೆ ಪಾಕಿಸ್ತಾನ,ನ್ಯೂಜಿಲ್ಯಾಂಡ್,ಆಫ್ಘಾನಿಸ್ತಾನ ತಂಡಗಳು 2ನೇ ಗುಂಪಿನಲ್ಲಿವೆ. ಹಾಗೆ ಮೊದಲ ಗುಂಪಿನಲ್ಲಿ ಇಂಗ್ಲೆಂಡ್, ವೆಸ್ಟ್ ಇಂಡಿಸ್ , ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ತಂಡಗಳಿರಲಿವೆ. ಇದೇ ಮೊದಲ ಬಾರಿಗೆ ಶ್ರೀಲಂಕಾ ಕ್ವಾಲಿಫೈರ್ ಪಂದ್ಯ ಆಡಲಿದೆ.

ಇದೇ ಅಕ್ಟೋಬರ್‌ 17ರಿಂದ ನವೆಂಬರ್‌ 14ರವರೆಗೆ ದುಬೈನಲ್ಲಿ  ಐಸಿಸಿ ಟಿ20 ಕ್ರಿಕೆಟ್‌

ವಿಶ್ವಕಪ್‌ ಟೂರ್ನಿ ನಡೆಯಲಿದ್ದು ಭಾರತ ಮತ್ತು ಪಾಕಿಸ್ತಾನ  ಒಂದೇ ಗುಂಪಿನಲ್ಲಿ ಮುಖಾಮುಖಿಯಾಗುತ್ತಿವೆ. 

Leave a Comment