Coastal Bulletin

ಮತ್ತೊಂದು ಹೆಣ್ಣು ಮಗುವೇ ಹುಟ್ಟಿದ‌ ಕೋಪಕ್ಕೆ ಪತ್ನಿ, ಪುತ್ರಿಯರನ್ನು ಬಾವಿಗೆ ತಳ್ಳಿದ ಕಿರಾತಕ

ಮತ್ತೊಂದು ಹೆಣ್ಣು ಮಗುವೇ ಹುಟ್ಟಿದ‌ ಕೋಪಕ್ಕೆ ಪತ್ನಿ, ಪುತ್ರಿಯರನ್ನು ಬಾವಿಗೆ ತಳ್ಳಿದ ಕಿರಾತಕ

ಹೆಣ್ಣು ಮಕ್ಕಳೇ ಹುಟ್ಟಿದ್ದಾರೆಂಬ ಕೋಪಕ್ಕೆ ವ್ಯಕ್ತಿಯೋರ್ವನು ತನ್ನ  ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಬಲವಂತವಾಗಿ ಬಾವಿಗೆ ತಳ್ಳಿದ ಹೃದಯವಿದ್ರಾವಕ ಘಟನೆ ಮಧ್ಯಪ್ರದೇಶದ ಛತ್ತಾರ್ ಪುರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಆರೋಪಿ ರಾಜಾ ಭೈಯಾ ಯಾದವ್ ಗೆ ಮೂರು ತಿಂಗಳ ಹಿಂದೆಯಷ್ಟೇ ಎರಡನೇ‌ ಮಗು ಜನಿಸಿತ್ತು. ಆತನನಿಗೆ ಮೊದಲ ಮಗುವೂ ಹೆಣ್ಣಾಗಿತ್ತು. 

ಆದರೆ ತವರಿನಲ್ಲಿದ್ದ ಹೆಂಡತಿ ಹಾಗೂ ಮಕ್ಕಳನ್ನು ಮರಳಿ ಮನೆಗೆ ಕರೆತರುವ ವೇಳೆ ಮಾರ್ಗ ಮಧ್ಯೆ ಸಿಗುವ ಪಡೋಯಿ

ಗ್ರಾಮದಲ್ಲಿರುವ ಬಾವಿಯೊಂದಕ್ಕೆ ಪತ್ನಿ ಹಾಗೂ ಮಕ್ಕಳನ್ನು ಬಲವಂತವಾಗಿ ತಳ್ಳಿದ್ದ ಕೊಲೆ ಮಾಡಲು ಯತ್ನಿಸಿದ್ದಾನೆ. 

ಈ ವೇಳೆ ಪತ್ನಿ ಪ್ರಾಣ ಉಳಿಸಿಕೊಳ್ಳಲು ಯತ್ನಿಸುವ ಸಂದರ್ಭ ಕಲ್ಲನ್ನೂ ಎತ್ತಿ ಹಾಕಿದ್ದಾನೆ. ಇವರ ಕೂಗಾಟ ಕೇಳಿ ಸ್ಥಳೀಯರು ಓಡಿ ಬಂದು, ಮಹಿಳೆ ಹಾಗೂ ಮೂರು ತಿಂಗಳ ಮಗುವನ್ನು ರಕ್ಷಿಸಿದ್ದಾರೆ. ಆದರೆ ದುರಾದೃಷ್ಟವಶಾತ್ 8 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ ಎಂದು ಚಾಂದ್ಲಾ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ರಾಜೇಂದ್ರ ಸಿಂಗ್ ತಿಳಿಸಿದ್ದಾರೆ.

ಆರೋಪಿ ರಾಜಾ ಭೈಯಾ ಯಾದವ್ ಅನ್ನು ಪೊಲೀಸರು ಬಂಧಿಸಿದ್ದು,  ಚಾಂದ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment