ಬಿಗ್ ಬಾಸ್ ಮನೆಯಲ್ಲಿ ಮನರಂಜನೆಯೇ ಇಲ್ಲ, ಬರೀ ಜಗಳ ಅಂತ ವೀಕ್ಷಕರು ಬೇಸರ ಮಾಡಿಕೊಂಡಿದ್ದಾರೆ. ಇದೇನಾ ಹ್ಯಾಪಿ ಬಿಗ್ ಬಾಸ್ ಅಂದ್ರೆ ಅಂತ ಪ್ರಶ್ನೆ ಮಾಡ್ತಿದ್ದಾರೆ. ಕಳೆದ 9 ಸೀಸನ್‌ಗಳಲ್ಲಿ ಇಲ್ಲದಷ್ಟು ಜಗಳ, ವಾದ-ವಿವಾದಗಳು ಈ ಸೀಸನ್‌ನಲ್ಲಿ ಇವೆ. ಬಿಗ್ ಬಾಸ್ ನೋಡಲು ಬರುತ್ತಿವೆ. ಗ್ರೂಪಿಸಂ, ಪರ್ಸನಲ್ ಅಟ್ಯಾಕ್ ಮಾಡಲಾಗ್ತಿದೆ. ವೈಯಕ್ತಿಕ ಆಟ ಆಡೋದು ಬಿಟ್ಟು ಬೇರೆಯವರಿಗೆ ಚಮಚಾ ರೀತಿ ಆಡ್ತಿದ್ದಾರೆ ಎಂದು ಅನೇಕ ವೀಕ್ಷಕರು ಮಾಧ್ಯಮಗಳಲ್ಲಿ, ಸೋಶಿಯಲ್ ಮೀಡಿಯಾಗಳಲ್ಲಿ ಹೇಳುತ್ತಿದ್ದಾರೆ.ಬಿಗ್ ಬಾಸ್ ಸ್ಪರ್ಧಿಗಳ ವೈಯಕ್ತಿಕ ವಿಷಯಗಳನ್ನು ಇಟ್ಟುಕೊಂಡು ಅದನ್ನು ಇಷ್ಟು ದೊಡ್ಡ ವೇದಿಕೆಯಲ್ಲಿ ಹೇಳಲಾಗುತ್ತಿದೆ. ಸ್ಪರ್ಧಿಗಳ ತಂದೆ-ತಾಯಿ, ಮಗುವಿನ ವಿಚಾರ ಇಲ್ಲಿ ಮಾತನಾಡೋದು ಬೇಕಾ ಎಂದು ಕಿಡಿಕಾರುತ್ತಿದ್ದಾರೆ.
ಶೋ ಶುರುವಾದಾಗಿನಿಂದ ಜಗಳಗಳು, ವಾದ-ವಿವಾದಗಳೇ ಹೆಚ್ಚಾಗಿವೆ. ಒಂದಲ್ಲ ಒಂದು ವಿಷಯಕ್ಕೆ ನಿತ್ಯ ಜಗಳ ಆಡೋದು, ಕೂಗಾಡೋದು ಆಗಿದೆ. ಟಾಸ್ಕ್ ಗೆದ್ದರೆ ಮಾತ್ರ ಬಿಗ್ ಬಾಸ್ ಟ್ರೋಫಿ ಗೆಲ್ತೀವಿ, ಜಗಳ ಆಡಿದ್ರೆ ಮಾತ್ರ ನಾವು ಈ ವಾರ ಉಳಿದುಕೊಳ್ತೀವಿ ಅಂತ ಸ್ಪರ್ಧಿಗಳು ಅಂದುಕೊಂಡ ಹಾಗಿದೆ. ಯಾವುದೇ ಟಾಸ್ಕ್ ಕೊಟ್ಟರೂ ದೈಹಿಕವಾಗಿ ದೌರ್ಜನ್ಯ ಮಾಡಿಯಾದರೂ ಸರಿ ಗೆಲ್ಲಬೇಕು ಅಂತ ಮುನ್ನುಗ್ಗುತ್ತಾರೆ.
ಕಳೆದ ವಾರ ಶೋನಲ್ಲಿ ಟಾಸ್ಕ್ ಆಡುವಾಗ ಗಾಯ ಆಗಿ ಡ್ರೋನ್ ಪ್ರತಾಪ್ ಹಾಗೂ ಸಂಗೀತಾ ಅವರು ಆಸ್ಪತ್ರೆ ಸೇರಿದ್ದು ತಮ್ಮ ಎರಡು ಕಣ್ಣುಗಳಿಗೂ ಗಂಭೀರವಾದ ಗಾಯಗಳಾಗಿವೆ.ನಿನ್ನೆಯ ವಾರಾಂತ್ಯದ ಕಾರ್ಯಕ್ರಮದಲ್ಲಿ ಇಬ್ಬರೂ ಕೂಡ ಕನ್ನಡಕ ಧರಿಸಿ ಹಾಜರಾಗಿದ್ದರು.
ಬಿಗ್‌ಬಾಸ್ ಮನೆಯೊಳಗೆ ಬಿಗ್‌ಬಾಸ್ ಲೋಕ ಆಟದಲ್ಲಿ ಗಂಧರ್ವರು ಮತ್ತು ರಾಕ್ಷಸರು ಎಂದು ಎರಡು ಗುಂಪುಗಳಾನ್ನಾಗಿ ಮಾಡಿ, ಹಲವು ಟಾಸ್ಕ್ ಗಳನ್ನು ನೀಡಲಾಗಿದೆ. ಟಾಸ್ಕ್ ವೇಳೆ ರಾಕ್ಷಸರು ಮತ್ತು ಗಂಧರ್ವರ ಗುಂಪುಗಳ ನಡುವೆ ಭಾರೀ ಕದನವೇ ನಡೆದಿದೆ.ಟಾಸ್ಕ್ ವೊಂದರಲ್ಲಿ ಸಂಗೀತಾ ಹಾಗೂ ಡ್ರೋಣ್ ಪ್ರತಾಪ್ ಅವರ ಮುಖಕ್ಕೆ ಅತಿಯಾಗಿ ಕೆಮಿಕಲ್ ನೀರು ಹಾಕಿದ ಪರಿಣಾಮ ಇಬ್ಬರೂ ಅಸ್ವಸ್ಥಗೊಂಡಿದ್ದರು. ಇದರಿಂದ ದಿಢೀರ್ ನೆ ಡ್ರೋನ್ ಪ್ರತಾಪ್ ಮತ್ತು ಸಂಗೀತಾ ಮನೆಯಿಂದ ಹೊರ ಬಂದು ಚಿಕಿತ್ಸೆ ಪಡೆದಿದ್ದರು.
ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಬಾರಿ ಸ್ಪರ್ಧಿ ಒಬ್ಬನನ್ನು ಅರೆಸ್ಟ್ ಮಾಡಲಾಗಿತ್ತು. ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಬಾರಿ ಸ್ಪರ್ಧಿ ಒಬ್ಬ ಅರೆಸ್ಟ್ ಆಗಿದ್ದು, ಹುಲಿ ಉಗುರು ಇರುವ ಪೆಂಡೆಂಟ್ ಧರಿಸಿದ್ದರು ಎಂಬ ಆರೋಪದ ಮೇಲೆ ಹಳ್ಳಿಕಾರ್ ಖ್ಯಾತಿಯ
ವರ್ತೂರ್ ಸಂತೋಷ್ ಬಂಧನವಾಗಿತ್ತು.ಆ ಪ್ರಕರಣ ಆದ ಬಳಿಕ ಬಿಗ್ ಬಾಸ್ ಸ್ಪರ್ಧಿ ವರ್ತೂರ್ ಸಂತೋಷ್ ವಿರುದ್ಧ ಮತ್ತೊಂದು ವಿವಾದ ಎದ್ದಿದೆ. ವರ್ತೂರ್ ಸಂತೋಷ್ ಅವರಿಗೆ ಹಳ್ಳಿಕಾರ್ ಒಡೆಯ ಎಂಬ ಹೆಸರು ಕೊಟ್ಟ ಹಿನ್ನೆಲೆ ಆಕ್ರೋಶಗೊಂಡಿರುವ ಮಂಡ್ಯದ ರೈತರು, ವರ್ತೂರ್ ಸಂತೋಷ್ಗೆ ಹಳ್ಳಿಕಾರ್ ಒಡೆಯ ಹೆಸರು ಇಟ್ಟಿರುವುದು ಸರಿಯಲ್ಲ ಎಂದಿದ್ದಾರೆ. ಅಲ್ಲದೆ, ಹಳ್ಳಿಕಾರ್ ಬಗ್ಗೆ ಚರ್ಚಾಗೋಷ್ಟಿ ಏರ್ಪಡಿಸಿ ವರ್ತೂರ್ ಸಂತೋಷ್ಗೂ ಆಹ್ವಾನ ನೀಡಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 10ನ ಸ್ಪರ್ಧಿ ತನಿಷಾ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ಎಸ್‌ಸಿ/ಎಸ್‌ಟಿ) ದೌರ್ಜನ್ಯ ಕಾಯ್ದೆಯಡಿ ಬೆಂಗಳೂರು ಹೊರವಲಯದ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿತ್ತು. ಖಾಸಗಿ ವಾಹಿನಿಯ ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲಿ ಅವಹೇಳನಕಾರಿ ಪದ ಬಳಕೆ ಆರೋಪ ಮಾಡಿದ್ದಾರೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದಡಿಗೆ ಬರುವ ಬೋವಿ ಜನಾಂಗಕ್ಕೆ ಧಾರಾವಾಹಿ ನಟಿ ತನಿಷಾ ಅವರು ಅವಮಾನ ಮಾಡಿದ್ದಾರೆಂದು ದೂರು ನೀಡಲಾಗಿದೆ. ಆದ್ದರಿಂದ ನಟಿ ತನಿಷಾ ಕುಪ್ಪುಂಡ ವಿರುದ್ದ ದೂರು ದಾಖಲಿಸಿ ಅವರ ವಿರುದ್ಧ ಕ್ರಮವನ್ನು ಕೈಗೊಂಡು ಬಿಗ್ ಬಾಸ್ ಮನೆಯಿಂದ ಹೊರ ಹಾಕಬೇಕು ಎಂದು ಆಗ್ರಹಿಸಲಾಗಿತ್ತು.
ಬಿಗ್ ಬಾಸ್ ಸೀಸನ್ 10 ಮನೋರಂಜನೆಗಿಂತ ವಿವಾದಗಳದ್ದೇ ಸುದ್ದಿ ಆಗಿರೋದು ಮಾತ್ರ ಸತ್ಯ.ಕಣ್ಣಿಗೆ ಗಾಯಗೊಂಡಿರುವ ಪ್ರತಾಪ್ ಹಾಗೂ ಸಂಗೀತಾ ಅವರ ಮುಂದಿನ ಆರೋಗ್ಯ ಸ್ಥಿತಿಗತಿಗಳು,ಸಂತೋಷ್ ಹಾಗೂ ತನಿಷಾ ಅವರ ಮುಂದಿನ ಕಾನೂನು ಹೋರಾಟಗಳು ಹೇಗಿರಬಹುದು ಎಂದು ಕಾದು ನೋಡಬೇಕಾಗಿದೆ. ಆದರೆ ಇದಕ್ಕೆಲ್ಲ ಖಾಸಗಿವಹಿನಿಯವರ ನಿರ್ಲಕ್ಷ್ಯವೇ ಕಾರಣ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.














