Coastal Bulletin

ದಿನ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದ್ದರೆ ಇತ್ತ ಚಿನಿವಾರ ಪೇಟೆಯಲ್ಲಿ ಕಳೆದ ಸತತ ಮೂರು ದಿನಗಳಿಂದ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ .

ಇಂದು 22 ಕ್ಯಾರೆಟ್ ಚಿನ್ನದಲ್ಲಿ 150 ರೂಪಾಯಿ ಇಳಿಕೆಯಾಗಿದ್ದು , 10 ಗ್ರಾಂ ಚಿನ್ನದ ಬೆಲೆ 45,350 ರೂಪಾಯಿಯಾಗಿದೆ .24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 10 ಗ್ರಾಂಗೆ 160 ರೂಪಾಯಿ ಇಳಿಕೆಯಾಗಿದೆ . ಈ ಮೂಲಕ 24 ಕ್ಯಾರೆಟ್ ಚಿನ್ನದ ಬೆಲೆ 49,470 ರೂಪಾಯಿಯಾಗಿದೆ.

 ಮಂಗಳವಾರದಂದು 10

ರೂಪಾಯಿ,ಸೋಮವಾರದಂದು 250 ರೂಪಾಯಿ , ಭಾನುವಾರ 10 ರೂಪಾಯಿ , ಶನಿವಾರ 400 ರೂಪಾಯಿ ಹಾಗೂ ಶುಕ್ರವಾರ 330 ರೂಪಾಯಿ ಇಳಿಕೆಯಾಗಿತ್ತು . 

ಜತೆಗೆ ಬೆಳ್ಳಿಯ ದರದಲ್ಲೂ ಇಳಿಕೆ ಕಂಡುಬಂದಿದೆ . ಒಂದು ಕೆಜಿ ಬೆಳ್ಳಿ ಬೆಲೆಯಲ್ಲಿ 200 ರೂಪಾಯಿ ಇಳಿಕೆಯಾಗಿದ್ದು , ಬೆಲೆ 71,300 ರೂಪಾಯಿಯಾಗಿದೆ.

Leave a Comment