Coastal Bulletin

ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಟೂರ್ನಿಯ ಬಹುಮಾನಗಳ ಮೊತ್ತ ಹೀಗಿದೆ ನೋಡಿ.

ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಗೆ ಟೀಮ್ ಇಂಡಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ಅಂತಿಮ ಹಂತದ ತಯಾರಿಯಲ್ಲಿವೆ.


ಜೂನ್ 18 ರಂದು ಇಂಗ್ಲೆಂಡ್ ನ ಸೌತಾಂಪ್ಟನ್ ನಲ್ಲಿ ನಡೆಯಲಿರುವ ಪೈನಲ್ ಪಂದ್ಯವನ್ನು ನೋಡಲು ಕ್ರಿಕೆಟ್ ಜಗತ್ತು ಕಾತರದಿಂದ ಎದುರು ನೋಡುತ್ತಿವೆ.ಈಗಾಗಲೇ ವಿಶ್ವ ಟೆಸ್ಟ್ ಪೈನಲ್‌‌ ಪಂದ್ಯವನ್ನು ಯಾರು ಗೆಲ್ತಾರೆ ಅಂತಾ ಕ್ರಿಕೆಟ್ ಪಂಡಿತರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.ಅಷ್ಟೇ ಅಲ್ಲದೆ ಗೆಲ್ಲುವ ನೆಚ್ಚಿನ ತಂಡ ಯಾವುದ ಅಂತಾ ಹೇಳ್ತಿಕೊಳ್ತಿದ್ದಾರೆ. 


ಈ ನಡುವೆ ಕ್ರಿಕೆಟ್  ಅಭಿಮಾನಿಗಳಿಗೆ ಒಂದು ರೀತಿಯ ಕುತೂಹಲವೂ ಇತ್ತು.ವಿಶ್ವ ಟೆಸ್ಟ್‌ ಕ್ರಿಕೆಟ್‌ ಪೈನಲ್ ಪಂದ್ಯ ಗೆದ್ದ ತಂಡ ಎಷ್ಟು ನಗದು ಬಹುಮಾನ ಪಡೆಯತ್ತೆ ಅಂತಾ ಪ್ರಶ್ನೆ

ಕುತೂಹಲ ಮೂಡಿತ್ತು.ಇದೀಗ ಐಸಿಸಿ ಈ ಪ್ರಶ್ನೆ ಮತ್ತು ಕುತೂಹಲಕ್ಕೆ ಸ್ಪಷ್ಟನೆ ನೀಡಿದೆ.ಹೌದು ವಿಶ್ವ ಕ್ರಿಕೆಟ್ ಪೈನಲ್ ಪಂದ್ಯ ಗೆದ್ದ ತಂಡದ ಬೊಕ್ಕಸಕ್ಕೆ 1.6 ಮಿಲಿಯನ್ ಡಾಲರ್ ಸೇರಿಕೊಳ್ಳಲಿದೆ.ಇನ್ನು ರನ್ನರ ಅಪ್ ತಂಡ 8 ಲಕ್ಷ ಡಾಲರ್ ಗಿಟ್ಟಿಸಿಕೊಳ್ಳಲಿದೆ.ಮೂರನೇ ಸ್ಥಾನ ಪಡೆದಿರುವ ತಂಡ 4.5 ಲಕ್ಷ ಡಾಲರ್ ಮತ್ತು ನಾಲ್ಕನೇ ಸ್ಥಾನ ಪಡೆದಿರುವ ತಂಡ 3.5 ಲಕ್ಷ ನಗದು ಬಹುಮಾನ ತನ್ನದಾಗಿಸಿಕೊಳ್ಳಲಿದೆ.ಹಾಗೆ ಐದನೇ ಸ್ಥಾನ ಪಡೆದ ತಂಡ 2 ಲಕ್ಷ ಡಾಲರ್ ಮತ್ತು ಇನ್ನುಳಿದ ನಾಲ್ಕು ತಂಡಗಳು ತಲಾ ಒಂದು ಲಕ್ಷ ಡಾಲರ್ ಬಹುಮಾನವನ್ನು ಗಿಟ್ಟಿಸಿಕೊಳ್ಳಲಿದೆ.ಎರಡು ವರ್ಷ ಐಸಿಸಿ ಚಾಂಪಿಯನ್ ಶಿಪ್ ಪಂದ್ಯದಲ್ಲಿ ಒಂಭತ್ತು ತಂಡಗಳು ಆಡಿವೆ.

Leave a Comment