ಬೆಂಗಳೂರು : ರಾಜ್ಯದ ಮೃಗಾಲಯಗಳಲ್ಲಿನ ಸ್ಥಿತಿ ಕಂಡು ಸ್ಯಾಂಡಲ್‌ವುಡ್ ನಟ ದರ್ಶನ್ ಪ್ರಾಣಿ , ಪಕ್ಷಿಗಳನ್ನು ದತ್ತು ಸ್ವೀಕರಿಸುವಂತೆ ಮನವಿ ಮಾಡಿದ್ದರು.ದರ್ಶನ್ ಕರೆಗೆ ಅಭೂತ ಪೂರ್ವ ಬೆಂಬಲ ವ್ಯಕ್ತವಾಗಿದೆ.
ದರ್ಶನ್ ಮಾತಿಗೆ ನೆರವಿನ ಹಸ್ತ ಚಾಚಿದ ನಟಿ ಅಮೂಲ್ಯ ಜಗದೀಶ್ ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಮೃಗಾಲಯದಲ್ಲಿ ಜಾಗ್ವಾರ್‌ವೊಂದನ್ನು ಒಂದು ವರ್ಷದ ಅವಧಿಗೆ ದತ್ತು ಪಡೆದಿದ್ದಾರೆ .
ಅಮೂಲ್ಯ ಈ ಕುರಿತು ಸೋಷಿಯಲ್ ವೀಡಿಯಾದಲ್ಲಿ ಬರೆದುಕೊಂಡಿದ್ದು ನಮ್ಮ ಕಡೆಯಿಂದ ಅಳಿಲು ಸೇವೆ ಸಲ್ಲಿಸಿರುವ ಖುಷಿ ನೀಡಿದೆ ಇಂತಹ ಒಂದು ಉತ್ತಮ
ಕಾರ್ಯಕ್ಕೆ ಬೆಂಬಲ ನೀಡಿ , ಪ್ರೋತ್ಸಾಹ ನೀಡುತ್ತಿರುವ ದರ್ಶನ್ ಅವರಿಗೆ ಧನ್ಯವಾದಗಳು ' ಎಂದು ಉಲ್ಲೇಖಿಸಿದ್ದಾರೆ.
ಅಮೂಲ್ಯ ಪತಿ ಜಗದೀಶ್ ಚಂದ್ರ ಟ್ವೀಟ್ ಜೊತೆಗೆ ಕರ್ನಾಟಕದ ಮೃಗಾಲಯ ಪ್ರಾಧಿಕಾರ ನೀಡಿರುವ ಪ್ರಮಾಣ ಪತ್ರವನ್ನು ಪೋಸ್ಟ್ ಮಾಡಿ ಜಾಗ್ವಾರ್ ದತ್ತು ಪಡೆಯಲು ಪ್ರೇರಣೆ ನೀಡಿದ್ದಕ್ಕಾಗಿ ದರ್ಶನ್‌ಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ .














