Coastal Bulletin

ಮುಂಬಯಿ :ಭಾರತದಲ್ಲಿ ವಿಶ್ವದಲ್ಲೇ ಅಗ್ಗದ ಸ್ಮಾರ್ಟ್‌ಫೋನ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಟಿಕ್ ಟೈಟಾನ್ ಗೂಗಲ್ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಿದ ಹೊಸ ‘ಜಿಯೋಫೋನ್ ನೆಕ್ಸ್ಟ್’ ಸೆಪ್ಟೆಂಬರ್ 10 ರ ಗಣೇಶ ಚತುರ್ಥಿ ದಿನದಂದು ಮಾರುಕಟ್ಟೆಗೆ ಬರಲಿದೆ ಎಂದು ರಿಲಯನ್ಸ್ ಅಧ್ಯಕ್ಷ ಮುಖೇಶ್ ಅಂಬಾನಿ ಪ್ರಕಟಿಸಿದ್ದಾರೆ.

ಫೋನ್‌ ಮೊದಲು ಭಾರತದಲ್ಲಿ ಬಿಡುಗಡೆಯಾಗಲಿದ್ದು ನಂತರ ಅದನ್ನು ವಿಶ್ವದ ಇತರ ಭಾಗಗಳಲ್ಲಿ ವಿಸ್ತರಿಸಲಾಗುವುದು. ಭಾರತೀಯರು ಅಗ್ಗದ ಸ್ಮಾರ್ಟ್‌ಫೋನ್‌ಗಳ ಬಗ್ಗೆ  ಆಸಕ್ತಿ ತೋರುತ್ತಿದ್ದು ಇಂತಹ ಸಮಯದಲ್ಲಿ ಈ ಸ್ಮಾರ್ಟ್ ಫೋನ್‌ ಬಿಡುಗಡೆಯಾಗುತ್ತಿದೆ.

ಸಂಪೂರ್ಣ ಫೀಚರ್​ಗಳನ್ನು ಒಳಗೊಂಡ ಸ್ಮಾರ್ಟ್​ಫೋನ್ ಇದಾಗಿದ್ದು ಗೂಗಲ್ ಮತ್ತು ಜಿಯೋದ ಎಲ್ಲ ಅಪ್ಲಿಕೇಷನ್​ಗಳನ್ನೂ ಸಪೋರ್ಟ್ ಮಾಡುತ್ತದೆ. ಜತೆಗೆ ಆಂಡ್ರಾಯಿಡ್ ಪ್ಲೇಸ್ಟೋರ್​ನ ಆ್ಯಪ್​ಗಳನ್ನೂ ಬಳಸಬಹುದು. ಈ

ಫೋನ್​ ಆಂಡ್ರಾಯಿಡ್ ಆಪರೇಟಿಂಗ್ ಸಿಸ್ಟಮ್ ಮೂಲಕ ಕಾರ್ಯ ನಿರ್ವಹಿಸುತ್ತದೆ. ಭಾರತೀಯ ಮಾರುಕಟ್ಟೆಗೆ ವಿಶೇಷವಾಗಿ ರೂಪಿಸಲಾಗಿರುವ ಪೋನ್ ಇದಾಗಿದ್ದು ತೀರಾ ಕಡಿಮೆ‌ ಬೆಲೆಯಲ್ಲಿ ಗ್ರಾಹಕರಿಗೆ ಲಭಿಸಲಿದೆ. ವಾಯ್ಸ್​ ಅಸಿಸ್ಟಂಟ್, ಆಟೋಮೆಟಿಕ್ ರೀಡ್- ಅಲೌಡ್ ಸ್ಕ್ರೀನ್ ಟೆಕ್ಸ್ಟ್, ಭಾಷಾಂತರ, ಸ್ಮಾರ್ಟ್ ಕ್ಯಾಮೆರಾ ಜತೆಗೆ ಆಗ್ಯುಮೆಂಟೆಡ್ ರಿಯಾಲ್ಟಿ ಫಿಲ್ಟರ್ಸ್ ಇನ್ನೂ ಸಾಕಷ್ಟು ಫೀಚರ್​ಗಳು ಜಿಯೋಫೋನ್ ನೆಕ್ಸ್ಟ್​ ನಲ್ಲಿ ಒಳಗೊಂಡಿದೆ.

Leave a Comment