ಉಡುಪಿ : ದಿನಾಂಕ 12/1/2023ರಂದು ಸ್ವಾಮಿ ವಿವೇಕಾನಂದ ಜಯಂತಿ ದಿನಾಚರಣೆಯ ಪ್ರಯುಕ್ತ ಸ್ವಚ್ಚ ಉಡುಪಿ,ಸ್ವಚ್ಚ ಭಾರತ ಸ್ವಚ್ಛತಾ ಆಂದೋಲನದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ರಾಷ್ಟೀಯ ಸ್ವಯಂ ಸೇವಾ ವಿದ್ಯಾರ್ಥಿಗಳಿಂದ ಸ್ವಚ್ಛತಾ ಆಂದೋಲನ ಕಾರ್ಯಕ್ರಮವು ನಡೆಯಿತು.
ಕಾಲೇಜಿನ ಉಪಪ್ರಾಂಶುಪಾಲರಾದ ನಾಗರಾಜ್ ಇವರು ದಿನದ ಮಹತ್ವವನ್ನು ತಿಳಿಸಿ ಪ್ರಮಾಣ ವಚನವನ್ನು ವಾಚಿಸುವುದರ ಮೂಲಕ ಸ್ವಚ್ಛತಾ ಆಂದೋಲನಕ್ಕೆ
ಚಾಲನೆ ನೀಡಿದರು.
ಸಂಸ್ಥೆಯ ಶಿಕ್ಷಕಿಯರಾದ n.s.s ಕಾರ್ಯಕ್ರಮಾಧಿಕಾರಿ ಸುಜಾತ, ಗ್ರೆಟ್ಟ ಮರೀನಾ ಸಾಲಿಸ್,ಜ್ಯೋತಿ ನಾಯಕ್, ಸಭಿತ, ಸೌಮ್ಯ ಇವರು ಉಪಸ್ಥಿತರಿದ್ದರು.













