ಬಿ.ಸಿ.ರೋಡ್ :ಸ್ವಾತಂತ್ರ್ಯ ಯೋಧ ಡಾ.ಅಮ್ಮೆಂಬಳ ಬಾಳಪ್ಪ ಜನ್ಮ ಶತಾಬ್ದಿ ಸಮಾರಂಭದ ಪೂರ್ವಭಾವಿ ಸಭೆ ಬಿ.ಸಿ.ರೋಡಿನ ಸಂಜಯಗಿರಿಯ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದಲ್ಲಿ ರವಿವಾರ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ್ದ ಸ್ವಾತಂತ್ರ್ಯ ಯೋಧ ಡಾ.ಡಾ.ಅಮ್ಮೆಂಬಳ ಬಾಳಪ್ಪ ಸ್ಮಾರಕ ಸೇವಾ ಪ್ರತಿಷ್ಠಾನ ಬಂಟ್ವಾಳ ಇದರ ಅಧ್ಯಕ್ಷರೂ , ಹಿರಿಯ ಪತ್ರಕರ್ತರೂ ಆದ ಅಮ್ಮೆಂಬಳ ಆನಂದ ಡಾ. ಅಮ್ಮೆಂಬಳ ಬಾಳಪ್ಪ ಜನ್ಮ ಶತಾಬ್ದಿ ಸಮಾರಂಭದ ರೂಪುರೇಷೆಗಳನ್ನು ವಿವರಿಸಿದರು.
ಸಭೆಯಲ್ಲಿ ಡಾ.ಅಮ್ಮೆಂಬಳ ಬಾಳಪ್ಪ ಜನ್ಮ ಶತಾಬ್ದಿ ಸಮಾರಂಭಕ್ಕೆ ಅತಿಥಿ ಗಣ್ಯರನ್ನು ಆಹ್ವಾನಿಸುವುದು. ದೇಶಭಕ್ತಿ ಗೀತೆ ಸ್ಪರ್ಧೆ ಆಯೋಜನೆ, ಅಮ್ಮೆಂಬಳ ಬಾಳಪ್ಪರ ಸ್ಮರಣಾರ್ಥ ಸಂಚಿಕೆ, ಸಾಧಕರಿಗೆ ಸನ್ಮಾನ ಮುಂತಾದ ವಿಷಯಗಳ ಬಗ್ಗೆ ಸಮಾಲೋಚನೆ ನಡೆಯಿತು.
ಡಾ.ಅಮ್ಮೆಂಬಳ ಬಾಳಪ್ಪ ಜನ್ಮ ಶತಾಬ್ದಿ ಸಮಾರಂಭದ ಸಮಿತಿಗೆ ಹಿರಿಯ ಪತ್ರಕರ್ತ ಆದ ಅಮ್ಮೆಂಬಳ ಆನಂದ ಅವರನ್ನು ಗೌರವಾಧ್ಯಕ್ಷರಾಗಿ, ರಾಣಿ ಅಬ್ಬಕ್ಕ ತುಳು
ಅಧ್ಯಯನ ಕೇಂದ್ರದ ಮುಖ್ಯಸ್ಥ ಪ್ರೊ.ತುಕಾರಾಮ ಪೂಜಾರಿ ಅವರನ್ನು ಅಧ್ಯಕ್ಷರಾಗಿ , ಪುಂಡಾರೀಕ್ಷಾ ಯು. ಅವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ,ಉಮೇಶ್ ಪಿ.ಕೆ ಅವರನ್ನು ಕೋಶಾಧಿಕಾರಿಯಾಗಿ , ಮಂಜು ವಿಟ್ಲ ಅವರನ್ನು ಪ್ರಧಾನ ಸಂಯೋಜಕರಾಗಿ ,ಸದಾನಂದ ಬಂಗೇರ ಮುಡಿಪು, ಸುರೇಶ್ ಬಂಗೇರ, ದಾಮೋದರ ಸಾಲ್ಯಾನ್, ಜನಾರ್ದನ ಕುಲಾಲ್ ಅವರನ್ನು ಸಮಿತಿ ಸದಸ್ಯರಾಗಿ ಹಾಗೂ ಡಾ.ಆಶಾಲತಾ ಸುವರ್ಣ, ಡಾ.ರಶ್ಮಿ ಅಮ್ಮೆಂಬಳ, ರತ್ನಾವತಿ, ಪ್ರಸಾದ್ ಕುಮಾರ್ ಮಾರ್ನಬೈಲ್, ಡಾ.ದುಗ್ಗಪ್ಪ ಕಜೆಕಾರು ಅವರನ್ನು ಸಂಪಾದಕ ಮಂಡಳಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.
ಡಿ.ಚಂದಪ್ಪ ಮೂಲ್ಯ, ಭೋಜ ಅಡ್ಯಾರ್, ಮಯೂರ್ ಉಳ್ಳಾಲ್, ಸದಾಶಿವ ಕುಲಾಲ್ ಸೇರಿ ಮೊದಲಾದವರು ಉಪಸ್ಥಿತರಿದ್ದರು.
ಉಮೇಶ್ ಪಿ.ಕೆ ಸ್ವಾಗತಿಸಿ, ದಾಮೋದರ್ ಬಿ.ಎಂ ವಂದಿಸಿದರು.













