ಬಂಟ್ವಾಳ:ಮುನಿಶ್ರೀ ಪ್ರೇರಣೆಯಂತೆ ಮಂಗಳೂರಿನಲ್ಲಿ ಪ್ರಾರ್ಥನಾ ಮಂದಿರ ನಿರ್ಮಿಸಲು ಯೋಜನೆ ರೂಪಿಸಲಾಗಿದ್ದು, ಶೀಘ್ರದಲ್ಲೇ ಭೂಮಿ ಪೂಜೆ ನೆರವೇರಿಸಲಾಗುವುದು ಎಂದು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದ್ದಾರೆ.
ಇಲ್ಲಿನ ಪಂಜಿಕಲ್ಲು ಭಗವಾನ್ ಶ್ರೀ ಆದಿನಾಥ ಸ್ವಾಮಿ ಬಸದಿಯಲ್ಲಿ ನೂತನ ಏಕಶಿಲಾ ಮಾನಸ್ತಂಭೋಪರಿ ಚತುಮುರ್ಖ 1008 ಶ್ರೀ ಆದಿನಾಥ ತೀರ್ಥನಂಕರರ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವ ಪ್ರಯುಕ್ತ ಶನಿವಾರ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುನಿಶ್ರೀ 108 ಅಮೋಘಕೀರ್ತಿ ಮಹಾರಾಜರು ಮತ್ತು ಅಮರಕೀರ್ತಿ ಮಹಾರಾಜರು ಮಂಗಲ ಪ್ರವಚನ ನೀಡಿದರು. 205
ಕ್ಷುಲ್ಲಕ್ ನಿರ್ವಾಹಣಾ ಸಾಗರ್ ಮಹಾರಾಜರು ಇದ್ದರು.
ವಕೀಲ ಎಂ.ಕೆ.ವಿಜಯಕುಮಾರ್ ಕಾರ್ಕಳ, ಭಾರತೀಯ ಜೈನ್ ಮಿಲನ್ ವಲಯ-8 ಅಧ್ಯಕ್ಷ ಪುಷ್ಪರಾಜ್ ಜೈನ್ ಮಂಗಳೂರು ಶುಭ ಹಾರೈಸಿದರು. ಇದೇ ವೇಳೆ ಶಶಿಧರ ಭಟ್ ಕೇವರ್ಶೆ ಅವರನ್ನು ಗೌರವಿಸಲಾಯಿತು.
ಪಂಚಕಲ್ಯಾಣ ಮಹೋತ್ಸವ ಸಮಿತಿ ಅಧ್ಯಕ್ಷ ಸುದರ್ಶನ್ ಜೈನ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಪತ್ರಕರ್ತೆ ನಮಿತಾ ಜೈನ್ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.














