ಬಂಟ್ವಾಳ : ಬರವಣಿಗೆಯಿಂದ ಮಕ್ಕಳ ಜ್ಞಾನ ವೃದ್ಧಿಯಾಗುತ್ತದೆ, ಬುದ್ಧಿಶಕ್ತಿ ಹೆಚ್ಚಾಗುತ್ತದೆ, ಮನಸ್ಸು ಶುದ್ಧವಾಗಿರಬೇಕು. ಹಾಗೆಯೇ ಬರವಣಿಗೆಯೂ ಶುದ್ಧವಾಗಿರುತ್ತದೆ. ಒಬ್ಬ ವ್ಯಕ್ತಿ ಅವನಾಗಿಯೇ ಪರಿಪೂರ್ಣವಾಗಿ ಹೊರ ಹೊಮ್ಮಬೇಕು. ಮೊದಲು ಉತ್ತಮ ನಾಗರಿಕನಾಗಬೇಕು. ನಾಯಕ ನಂತರ ಆಗಬಹುದು. ಸರಕಾರಿ ಶಾಲೆಯಲ್ಲಿ ಸಿಗುವ ಶಿಕ್ಷಣದಿಂದ ಮಕ್ಕಳಿಗೆ ಒಳ್ಳೆಯ ರೀತಿಯಲ್ಲಿ ಜೀವನವನ್ನು ನಡೆಸಲು ಕಲಿಸುತ್ತದೆ. ಪತ್ರಿಕೆಯ ಸಂಚಿಕೆಗೆ ಬರೆಸಿ ಅದನ್ನು ಮುದ್ರಣ ಮಾಡಿ ಹೊರತರುವ ಮೂಲಕ ಮಕ್ಕಳಿಗೆ ಬರವಣಿಗೆ ಉತ್ತೇಜನ ನೀಡಿವುದು ನಲ್ಕೆಮಾರ್ ಶಾಲೆ ಪ್ರಥಮ ಎಂದು ಜೇಸಿಐ ಬಂಟ್ವಾಳ ಇದರ ಅಧ್ಯಕ್ಷ ರೋಶನ್ ರೈ ತಿಳಿಸಿದರು.
ಸೋಮವಾರ ನಲ್ಕೆಮಾರ್ ಸರಕಾರಿ ಉನ್ನತೀಕರಿಸಿದ ಹಿರಿಯ ಶಾಲೆಯಲ್ಲಿ ನಡೆದ ಅಭ್ಯುದಯ ಶಾಲೆಯ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದರು. ಜೆಸಿಐ ಬಂಟ್ವಾಳ ಇದರ ನಿಕಟಪೂರ್ವಾಧ್ಯಕ್ಷ ಉಮೇಶ್ ಮೂಲ್ಯ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವಿಜಯ ಕುಮಾರ್,
ಸದಸ್ಯ ಯಾದವ ಅಗ್ರಬೈಲು ಈ ಸಂದರ್ಭ ಉಪಸ್ಥಿತರಿದ್ದರು. ಶಿಕ್ಷಕಿ ಮೋಹಿನಿ ಸ್ವಾಗತಿಸಿದರು, ಶಿಕ್ಷಕಿ ರೇಖಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಮೋಹಿನಿ ಧನ್ಯವಾದ ನೀಡಿದರು. ಶಿಕ್ಷಕಿ ಸೌಮ್ಯ, ಶಿಕ್ಷಕಿ ಮಮತಾ, ಶಿಕ್ಷಕಿ ಅಕ್ಷತಾ ಕಾರ್ಯಕ್ರಮಕ್ಕೆ ಸಹಕರಿಸಿದ್ದರು.














