ಮಂಗಳೂರು: ನಗರದ ಗರೋಡಿ ಬಳಿ 2022ರ ನ.19ರಂದು ಆಟೋರಿಕ್ಷಾದಲ್ಲಿ ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟದ ಸಂತ್ರಸ್ತ, ಆಟೊಚಾಲಕ ಪುರುಷೋತ್ತಮ ಪೂಜಾರಿ ಅವರಿಗೆ ಶಾಸಕ ವೇದವ್ಯಾಸ ಕಾಮತ್ ನೀಡಿದ ನೂತನ ಆಟೊರಿಕ್ಷಾವನ್ನು ಹಾಗೂ ಬಿಜೆಪಿ ವತಿಯಿಂದ ರೂ. 5 ಲಕ್ಷ ಮೊತ್ತದ ಚೆಕ್ ಅನ್ನು ಭಾನುವಾರ ಹಸ್ತಾಂತರಿಸಿದ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡಿದರು.
ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟಗೊಂಡಾಗ ಪುರುಷೋತ್ತಮ ಪೂಜಾರಿಯವರನ್ನು ಅಮಾಯಕ ಎನ್ನುವ ಬದಲು ಎನ್‌ಐಎ ಭಯೋತ್ಪಾದಕ ಎಂದವನನ್ನು ಅಮಾಯಕ ಎಂದು ಕಾಂಗ್ರೆಸ್ ಮುಖಂಡರು ಹೇಳಿಕೆ ನೀಡಿದ್ದರು. ಅವರಿಗೆ ಈಗ ರಾಷ್ಟ್ರೀಯ ತನಿಖಾ ಸಂಸ್ಥೆಯೇ (ಎನ್‌ಐಎ) ಉತ್ತರ ಕೊಟ್ಟಿದೆ. ಇದಕ್ಕೆ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಏನು ಹೇಳುತ್ತಾರೆ’ ಎಂದು ಪ್ರಶ್ನಿಸಿದರು.
ಪುರುಷೋತ್ತಮ ಪೂಜಾರಿ ಅವರ ಪತ್ನಿ ಚಿತ್ರಾಕ್ಷಿ ಅವರು ಆಟೋರಿಕ್ಷಾ ನೀಡಿದ ಶಾಸಕರಿಗೆ ಹಾಗೂ ಆರ್ಥಿಕ ನೆರವು ನೀಡಿದ ಬಿಜೆಪಿಗೆ ಧನ್ಯವಾದ ಸಲ್ಲಿಸಿದರು.
‘ಘಟನೆ ನಡೆದಾಗ ವಿಶ್ವಹಿಂದೂ ಪರಿಷತ್ ಮುಖಂಡ ಶರಣ್ ಪಂಪ್‌ವೆಲ್ ಹಾಗೂ ಕಾರ್ತಿಕ್ ಅವರು ಕುಟುಂಬದ ಜೊತೆಗೇ ಇದ್ದು ನೆರವಾಗಿದ್ದಾರೆ’ ಎಂದು ಸ್ಮರಿಸಿದರು.
ಶಾಸಕ ವೇದವ್ಯಾಸ ಕಾಮತ್, ಮೇಯರ್ ಜಯಾನಂದ ಅಂಚನ್, ಉಪಮೇಯರ್ ಪೂರ್ಣಿಮಾ, ಪಾಲಿಕೆಯ ಸಚೇತಕ ಪ್ರೇಮಾನಂದ ಶೆಟ್ಟಿ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರವಿಶಂಕರ ಮಿಜಾರ್, ಸ್ಥಳೀಯ ಪಾಲಿಕೆ ಸದಸ್ಯ ಸಂದೀಪ್ ಗರೋಡಿ, ವಿಶ್ವ ಹಿಂದೂ ಪರಿಷತ್ತಿನ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಹಾಗೂ ಇತರರು ಉಪಸ್ಥಿತರಿದ್ದರು.














