ಆಟೋ ನಿಲ್ಲಿಸಿ ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ

Coastal Bulletin
ಆಟೋ ನಿಲ್ಲಿಸಿ ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ

ಬಂಟ್ವಾಳ : ಇಲ್ಲಿನ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪಾಣೆಮಂಗಳೂರಿನ ಹಳೆಯ ಸೇತುವೆಯಲ್ಲಿ ಆಟೋ ನಿಲ್ಲಿಸಿ ನಾಪತ್ತೆಯಾಗಿದ್ದ ಮೆಲ್ಕಾರ್ ಮಾರ್ನಬೈಲು ನಿವಾಸಿ ಪ್ರೀತಂ ಲೋಬೋ (50) ಅವರ ಮೃತದೇಹ ಇಂದು ಅ.30 ರಂದು ನೇತ್ರಾವತಿ ನದಿಯ ಡ್ಯಾಂ ಸಮೀಪ ಮರವೊಂದರಲ್ಲಿ ಪತ್ತೆಯಾಗಿದೆ.

ಅ. 29 ರಂದು ಸ್ಥಳೀಯ ಈಜುಗಾರರು, ಬಂಟ್ವಾಳ ಅಗ್ನಿಶಾಮಕ ಮತ್ತು ತುರ್ತು ಸೇವಾ ದಳದ ಸಿಬ್ಬಂದಿ ದಿನಪೂರ್ತಿ ನದಿಯಲ್ಲಿ ಶೋಧ ನಡೆಸಿದ್ರೂ, ಯಾವುದೇ ರೀತಿಯ ಸುಳಿವು ದೊರಕಿರಲಿಲ್ಲ. ಆದರೆ ಇಂದು ಮೃತದೇಹ ಮರವೊಂದರಲ್ಲಿ ಸಿಲುಕಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ತಿಳಿದುಬಂದಿದೆ

ಘಟನೆಯ ವಿವರ:

ಅ 29ರಂದು ಪಾಣೆಮಂಗಳೂರಿನ ಸೇತುವೆಯ ಮೇಲೆ ಅನಾಥ ಅಟೋ ರಿಕ್ಷಾ ನೋಡಿದ ಸ್ಥಳೀಯರು ಈ ಬಗ್ಗೆ ಬಂಟ್ವಾಳ

ನಗರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿದ್ದು, ಸ್ಥಳೀಯ ಈಜುಪಟು ಯುವಕರಾದ ಮುಹಮ್ಮದ್ ಮಮ್ಮು ಗೂಡಿನಬಳಿ, ಹನೀಫ್ ಅಕ್ಕರಂಗಡಿ, ನಿಸಾರ್ ಎಂ.ಕೆ ಹಾಗೂ ಇಬ್ರಾಹಿಂ ಎಂ.ಕೆ ಅವರ ನೇತೃತ್ವದ ತಂಡ ಅಗ್ನಿಶಾಮಕ ಸಿಬ್ಬಂದಿಗಳ ಜೊತೆ ನದಿಯಲ್ಲಿ ಶೋಧ ಕಾರ್ಯವನ್ನೂ ನಡೆಸಿದ್ದಾರೆ ಎನ್ನಲಾಗಿದೆ. 

ಆದರೆ ಬುಧವಾರ ಸಂಜೆವರೆಗೂ ಚಾಲಕನ ಇರುವಿಕೆ ಬಗ್ಗೆ ಯಾವುದೇ ಮಾಹಿತಿ ದೊರಕಿರಲಿಲ್ಲ..

Leave a Comment