ಬಂಟ್ವಾಳ :ಪುದು ಗ್ರಾಮ ಪಂಚಾಯತ್ ಇದರ ಮೊದಲ ಸಾಮಾನ್ಯ ಸಭೆಯ ಸಂದರ್ಭದಲ್ಲಿ ಪಡಿ ಸಂಸ್ಥೆ ಮಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಇವರ ಸಹಯೋಗದಲ್ಲಿ ಗ್ರಾಮ ಮಟ್ಟದ ಶಿಕ್ಷಣ ಅವಲೋಕನ ಕಾರ್ಯಕ್ರಮ ಮತ್ತು ಕಾನೂನು ಅರಿವು ಕಾರ್ಯಕ್ರಮವು ಪುದು ಗ್ರಾ ಪಂ ನಲ್ಲಿ ಅ. 30ರಂದು ನಡೆಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಪಂಚಾಯತ್ ಅಧ್ಯಕ್ಷರಾದ ರಮ್ಲಾನ್ ಮಾರಿಪಳ್ಳ ಇವರು ವಹಿಸಿದರು. ಪಡಿ ಸಂಸ್ಥೆಯ ಸಿ.ಇ.ಒ ರೆನ್ನಿ ಡಿ'ಸೋಜ ಇವರು ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ ಶಿಕ್ಷಣ ಅವಲೋಕನ ಕಾರ್ಯಕ್ರಮ ರೂಪುರೇಷೆ ಮತ್ತು ಉದ್ದೇಶಗಳ ಕುರಿತು ಮಾತನಾಡಿದರು. ನಂತರ ಕಾನೂನು ಸೇವೆಗಳ ಸಮಿತಿ ಬಂಟ್ವಾಳದ ವಕೀಲಾರಾದ ಸುಚಿತ್ರಾ ಕೆ. ಇವರು ಕಾನೂನು ಮಾಹಿತಿ ನೀಡಿದರು.
ಸ್ವಚ್ಛತೆಗಾಗಿ ಬಹುಮಾನ ಘೋಷಣೆ:
ಈ ಸಂದರ್ಭದಲ್ಲಿ ಪುದು ಗ್ರಾ ಪಂ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಮಾತನಾಡಿ ಗ್ರಾಮ ಸ್ವಚ್ಛವಾದರೆ ದೇಶ ಸ್ವಚ್ಛವಾಗುತ್ತದೆ ಆದ್ದರಿಂದ ಪುದು ಗ್ರಾ ಪಂ ವ್ಯಾಪ್ತಿಯ ಹೆದ್ದಾರಿ ಬದಿಯಲ್ಲಿ ವಾಹನದಲ್ಲಿ ಬಂದು ಕಸ ಎಸೆಯುವವರ ಬಗ್ಗೆ ಮಾಹಿತಿ ಕೊಟ್ಟಲ್ಲಿ ಮಾಹಿತಿದಾರರಿಗೆ ರೂ 1000ಸಾವಿರ ಬಹುಮಾನ ಕೊಡುವುದಾಗಿ
ಘೋಷಿಸಿದರು.
ಪುದು ಗ್ರಾಮ ಪಂಚಾಯತ್, ರುಕ್ಸಾನ ಭಾನು ಉಪಾಧ್ಯಕ್ಷರು, ಪುದು ಗ್ರಾಮ ಪಂಚಾಯತ್, ಡಾ. ಸ್ಮೃತಿ ಯು. ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಪುದು ಗ್ರಾಮ ಪಂಚಾಯತ್, ಎಲ್ಲಾ ಸದಸ್ಯರು ಪುದು ಗ್ರಾಮ ಪಂಚಾಯತ್, ರೆನ್ನಿ ಡಿಸೋಜ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಪಡಿ ಮಂಗಳೂರು, ಸುಚಿತ್ರಾ ಕೆ ವಕೀಲರು, ಕಾನೂನು ಸೇವೆಗಳ ಸಮಿತಿ ಬಂಟ್ವಾಳ ತಾಲ್ಲೂಕು, ಕವಿತಾ, ಕಾರ್ಯದರ್ಶಿ ಪುದು ಗ್ರಾಮ ಪಂಚಾಯತ್, ಆಶಾ, ಆರೋಗ್ಯ ಕಾರ್ಯಕರ್ತೆಯರು, ಸಂಜೀವಿನಿ ಸದಸ್ಯರು, ಪಡಿ ಸಂಸ್ಥೆ ಸಿಬ್ಬಂದಿ ವರ್ಗದವರು, ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳು. ಕಾರ್ಯಕ್ರಮ ನಿರೂಪಣೆ, ಅಸುಂತಾ ಡಿ'ಸೋಜ ಪಡಿ ಮಂಗಳೂರು, ವಿವೇಕ್ ಎಲ್ಲಾರನ್ನು ಸ್ವಾಗತಿಸಿದರು.














