ಬಂಟ್ವಾಳ :ಮೂರು ವರ್ಷಗಳಿಗೊಮ್ಮೆ ಆರು ಗ್ರಾಮದ ಭಕ್ತರ ಕೂಡುವಿಕೆಯಲ್ಲಿ, ಪ್ರತಿ ಮನೆಯಲ್ಲಿ 48ದಿನ ಶ್ರೀರಾಮ ನಾಮ ಜಪ ಪಠನೆಯೊಂದಿಗೆ ಆಯೋಜಿಸಲಾಗುವ "ಶ್ರೀ ರಾಮ ನಾಮ ತಾರಕ ಜಪ ಯಜ್ಞ"ವು ಈ ಬಾರಿ ಡಿ.21ರಂದು ತಾಲೂಕಿನ ಕಳ್ಳಿಗೆ-ಪುದು ಗ್ರಾಮದ ನೆತ್ತರಕೆರೆಯಲ್ಲಿ ನಡೆಯಲಿದ್ದು, ಇದರ ಪೂರ್ವಭಾವಿಯಾಗಿ ನಡೆಯುವ 48 ದಿನಗಳ ಶ್ರೀರಾಮ ನಾಮ ತಾರಕ ಮಂತ್ರದ ಜಪ ಸಂಕಲ್ಪ ದೀಕ್ಷಾ ಕಾರ್ಯಕ್ರಮವು ನ.2ರಂದು ಆದಿತ್ಯವಾರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ನಡೆಯಲಿದೆ.
ದೀಕ್ಷಾ ಕಾರ್ಯಕ್ರಮ ನಡೆಯುವ ಸ್ಥಳಗಳು:
ಅಂದು ಬೆಳಿಗ್ಗೆ ಗಂಟೆ 6-45 ವಿಠಲ ಶೆಟ್ಟಿ ಸಭಾ ಭವನ ನೆತ್ತರಕೆರೆ,8-00 ಮಹಮ್ಮಾಯಿ ಕಟ್ಟೆ, ಅಬ್ಬೆಟ್ಟು,8-30 ನಾಗನಕಟ್ಟೆ, ಶ್ರೀರಾಮ ನಗರ, ಬೆಂಜನಪದವು,8-30 ಜೈ ಹನುಮಾನ್ ಮಂದಿರ, ಪೊಡಿಕಲ ಕಂಬ್ಳೆ,9-00 ಶ್ರೀ ಶಾರದಾ ಪೂಜಾ ಸೇವಾ ವೇದಿಕೆ ಸಭಾಭವನ, ಕೊಡ್ಮಾಣ್,9-00 ಶ್ರೀ ರಾಮ ವೈದ್ಯನಾಥ ಭಜನಾ ಮಂದಿರ, ಸುಜೀರು,9-00 ಶ್ರೀ ಹನುಮಾನ್ ಮಂದಿರ, ಸುಜೀರು ದತ್ತನಗರ,9-00 ಶ್ರೀ ನಾಗರಕೇಶ್ವರೀ ಕ್ಷೇತ್ರ, ನಾಣ್ಯ,9-30 ಶ್ರೀ ಆಂಜನೇಯ ದೇವಸ್ಥಾನ, ಫರಂಗಿಪೇಟೆ,10-00 ಶ್ರೀ ಲಕ್ಷ್ಮೀವಿಷ್ಣುಮೂರ್ತಿ ದೇವಸ್ಥಾನ, ದೇವಂದಬೆಟ್ಟು,10-00 ಶ್ರೀ ರಾಮ ಮಂದಿರ, ಹೊಗೆಗದ್ದೆ,10-00 ಶ್ರೀ ರಾಮ ಮಂದಿರ, ಕೊಟ್ಟಿಂಜ,10-00 ಶ್ರೀ ಕೋರಬ್ಬು ದೈವಸ್ಥಾನ, ಕುಮೇಲ್,ಸಂಜೆ 5-00 ಶ್ರೀ ಅನ್ನಪೂರ್ಣೇಶ್ವರೀ ಮಿತ್ರ
ಮಂಡಳಿ ಕಬೇಲ ಇಲ್ಲಿ ಶ್ರೀರಾಮ ನಾಮ ತಾರಕ ಮಂತ್ರದ ಜಪ ಸಂಕಲ್ಪ ದೀಕ್ಷಾ ಕಾರ್ಯಕ್ರಮ.ನಡೆಯಲಿದೆ.
ಸ್ವಾಮೀಜಿಗಳ ದಿವ್ಯ ಉಪಸ್ಥಿತಿ:
ಶ್ರೀರಾಮ ನಾಮ ತಾರಕ ಮಂತ್ರ ದೀಕ್ಷಾ ಕಾರ್ಯಕ್ರಮದಲ್ಲಿ ಪೊಳಲಿ ರಾಮಕೃಷ್ಣ ತಪೋವನದ ವಿವೇಕಾ ಚೈತನ್ಯಾನಂದ ಸ್ವಾಮೀಜಿ, ರಾಜ್ಯ ಧಾರ್ಮಿಕ ಪರಿಷತ್ ಮಾಜಿ ಸದಸ್ಯರಾದ ಕಶೆಕೋಡಿ ಸೂರ್ಯನಾರಾಯಣ ಭಟ್, ಗೋವಿನತೋಟ ರಾಧಾ ಸುರಭಿ ಗೋಮಂದಿರದ ಭಕ್ತಿ ಭೂಷಣ್ ದಾಸ್ ಪ್ರಭುಜೀ ಉಪಸ್ಥಿತರಿರುವರು.
60ಕ್ಕೂ ಅಧಿಕ ಸ್ಥಳಗಳಲ್ಲಿ ಕಾರ್ನರ್ ಬೈಠಕ್:
ಕಾರ್ಯಕ್ರಮದ ಯಶಸ್ವಿಗಾಗಿ ಈಗಾಗಲೇ 60ಕ್ಕೂ ಅಧಿಕ ಸ್ಥಳಗಳಲ್ಲಿ ಕಾರ್ನರ್ ಬೈಠಕ್ ನಡೆಸಿ ಶ್ರೀ ರಾಮ ಭಕ್ತರೊಂದಿಗೆ ಸಮಾಲೋಚನೆ ನಡೆಸಲಾಗಿದೆ ಎಂದು ಸಮಿತಿಯ ಅಧ್ಯಕ್ಷ ದೇವದಾಸ ಕೊಡ್ಮಾಣ್ ಹಾಗೂ ಸಂಯೋಜಕ ದಾಮೋದರ ನೆತ್ತರಕೆರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.















