ಬಂಟ್ವಾಳ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಹಳೆಯ ಅನ್ನಛತ್ರವನ್ನು ತೆಗೆದು ನೂತನ ಅನ್ನ ಛತ್ರ ಹಾಗೂ ಮದುವೆ ಸಭಾಂಗಣಕ್ಕೆ ಮೇ. 28ರಂದು ಗುರುವಾರ ಮುಹೂರ್ತವನ್ನು ಮಾಡಲಾಯಿತು.
ಶ್ರೀ ಕ್ಷೇತ್ರದಲ್ಲಿ 4.50ಕೋ ರೂ.ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಸುಸಜ್ಜಿತವಾದ ಅನ್ನ ಛತ್ರ ಹಾಗೂ 3.50ಕೋ. ರೂ ವೆಚ್ಚದಲ್ಲಿ ನೂತನ ಮದುವೆ ಸಭಾಂಗಣವನ್ನು ನಿರ್ಮಿಸಲು ದೇವರಲ್ಲಿ ತಂತ್ರಿಗಳು, ಅರ್ಚಕರು, ಗುತ್ತಿನವರು, ಆಡಳಿತಮಂಡಳಿ ಹಾಗೂ ಭಕ್ತಾಧಿಗಳು ಸೇರಿ ಪ್ರಾರ್ಥನೆ ಮಾಡಲಾಯಿತು.
ದೇವಳದ ಸುಬ್ರಹ್ಮಣ್ಯ ತಂತ್ರಿ, ಪವಿತ್ರಪಾಣಿ ಅನುವಂಶಿಕ ಮೊಕ್ತೇಸರ ಮಾಧವ ಭಟ್, ಪೊಳಲಿ ಅಡಿಗಳು ಶ್ರೀ ಕೆ. ರಾಮ ಭಟ್, ಪದ್ಮನಾಭ ಭಟ್, ಶ್ರೀಕಾಂತ್ ಮಯ್ಯ ಪ್ರಾರ್ಥಿಸಿ ಪ್ರಸಾದವನ್ನು ಹಾಕಿ ಕಾಮಗಾರಿ ಪ್ರಾರಂಬಿಸಿ ಶೀಘ್ರಗತಿಯಲ್ಲಿ ಅನ್ನಛತ್ರ ಹಾಗೂ ಸಭಾಂಗಣವು ನಿರ್ಮಾಣಗೊಂಡು ದೇವಳಕ್ಕೆ ಬರುವ ಭಕ್ತಾಧಿಗಳಿಗೆ ಅನುಕೂಲವಾಗುವಂತೆ ದೇವರಲ್ಲಿ ಪ್ರಾರ್ಥಿಸಿ ನಿರ್ಮಿತಿ ಕೇಂದ್ರದ ಅಧಿಕಾರಿ ನವೀನ್
, ದೇವಳದ ಇಂಜಿನಿಯರ್ ಲಕ್ಷಣ್ ಪೂಜಾರಿ, ಕಾಂಟ್ರಾಕ್ಟರ್ ಗಿರೀಶ್ ಅವರಿಗೆ ಪ್ರಸಾದ ನೀಡಿದರು.
ಈ ಸಂದರ್ಭದಲ್ಲಿ ದೇವಳದ ಆಡಳಿತ ಮೊಕ್ತೇಸರ ಡಾ.ಎ.ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ , ಮಾಜಿ ಸಚಿವ ಬಿ.ರಮಾನಾಥ ರೈ, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಕೃಷ್ಣಕುಮಾರ್ ಪೂಂಜ, ಜೀವರಾಜ್ ಶೆಟ್ಟಿ ಅಮ್ಮುಂಜೆಗುತ್ತು, ಶಿವಪ್ರಸಾದ್ ಶೆಟ್ಟಿ ಅಮ್ಮುಂಜೆಗುತ್ತು, ಕೃಷ್ಣರಾಜ ಮಾರ್ಲ ಮುತ್ತೂರು, ವಿದ್ಯಾಚರಣ್ ಭಂಡಾರಿ ಮೊಗರುಗುತ್ತು, ಭುವನೇಶ್ ಪಚಿನಡ್ಕ, ಚಂದ್ರಶೇಖರ್ ಭಂಡಾರಿ,ಭಾಸ್ಕರ್ ಭಟ್ ಗಂಜಿಮಠ, ಯಶವಂತ ಪೂಜಾರಿ ಪೊಳಲಿ,ಚಂದ್ರಹಾಸ ಪಲ್ಲಿಪಾಡಿ, ಲೋಕೇಶ್ ಭಂಡಾರಿ, ದೇವಳದ ಕಾರ್ಯನಿರ್ವಹಣಾಧಿಕಾರಿ ಚಂದ್ರಮೋಹನ್ ಹಾಗೂ ದೇವಳದ ಸಿಬ್ಬಂದಿಗಳು ಇದ್ದರು.















