ಬಂಟ್ವಾಳ :ಶ್ರೀಮತಿ ಕುಶಲಾಕ್ಷಿ ವಿ ಕುಲಾಲ್ ಕಣ್ವತೀರ್ಥ ರವರ ಹನ್ನೊಂದನೆಯ ತುಲು ಕೃತಿ ಇತ್ತೀಚೆಗೆ ಕಥಾ ಬಿಂದು ಪ್ರಕಾಶನದ 18ನೇ ವರ್ಷದ ಸಾಹಿತ್ಯೋತ್ಸವದಲ್ಲಿ ಬಿಡುಗಡೆಯಾಯಿತು.
ಮಕ್ಕಳ ಪ್ರೀತಿಯ ತಿಂಡಿ, ಕರಾವಳಿ ತುಳುನಾಡಿನಲ್ಲಿ ಬೋಟಿಯೆಂದೇ ಕರೆಸಿಕೊಳ್ಳುವ ತಿಂಡಿಯ ಬಗ್ಗೆ ಹೆಣೆದ ತುಳು ಕಾದಂಬರಿ 'ಬೋಟಿ.
ಈಗಾಗಲೇ ತುಳುವಿನಲ್ಲಿ ಹತ್ತು ಕೃತಿಗಳನ್ನು ಪ್ರಕಟಿಸಿದ್ದು ಇದು ಅವರ ಹನ್ನೊಂದನೇ ಯ ಕೃತಿ. .ನಾನೊಬ್ಬಳು ತುಲುವೆದಿ,ನನ್ನ ಮಾತೃಭಾಷೆ ತುಳು,ನನ್ನ ಮಾತೃಭಾಷಾ ಪ್ರೇಮವು ನನ್ನೆಲ್ಲಾ ಬರಹಗಳನ್ನು ತುಳುವಿನಲ್ಲೇ ಬರೆಯುವಂತೆ ಮಾಡಿದೆ.ಇದಕ್ಕೆ ತುಳುವರ ಪ್ರೋತ್ಸಾಹವೇ ಕಾರಣ ಎಂದು ಕೃತಿ ಬಿಡುಗಡೆ ಯ ಸಂದರ್ಭದಲ್ಲಿ ನುಡಿದರು.
ಈ ಕತೆಯು ಚಂದ್ರಿ ಎಂಬ ತಾಯಿ ಹಾಗೂ ನವೀನನೆಂಬ ಆಕೆಯ ಮಗನ ಸುತ್ತಲೂ ಹೆಣೆದು ಕತೆಯಾಗಿದೆ.ಇಲ್ಲಿ ತಂದೆ ತಾಯಿಯರನ್ನು ದಿಕ್ಕರಿಸಿ ಪಿಯತಮನ ಹಿಂದೆ ಓಡಿಹೋದ ಹೆಣ್ಣೊಬ್ಬಳಿಗೆ ಒದಗುವ ಸಂದಿಗ್ಧ ಪರಿಸ್ಥಿತಿ, ರಕ್ತಸಂಬಂಧಿಗಳೇ ಅಲ್ಲದವರು ಸಹಾಯಕ್ಕೆ ಒದಗುವ ಪರಿ,ಬಡತನ,ತಂದೆಯಿಂದ ದೂರಾದ ಮಗನ ಸ್ಥಿತಿ,ತಾಯಿ ಸೆರಗಿನ ತುದಿಯಲ್ಲಿ ಕಟ್ಟಿ ತಂದುಕೊಟ್ಟ ಬೋಟಿಯ ರುಚಿ ಏನೆಲ್ಲಾ ಮಾಡುತ್ತದೆ,ಹಿರಿಯರು
ತಮ್ಮೊಳಗಿನ ದ್ವೇಷ ಹಗೆತನದ ಬಗ್ಗೆ ಮಕ್ಕಳ ಮುಂದೆ ಮಾತನಾಡಿದರೂ ಅದು ಮಕ್ಕಳ ಮನಸ್ಸಿನಲ್ಲಿ ಯಾವ ರೀತಿಯ ಪ್ರಭಾವವನ್ನು ಬೀರುತ್ತದೆ.ಮಕ್ಕಳ ಮುಗ್ಧ ಮನಸ್ಸಿನ ತುಮುಲಗಳೇನು, ನೋವು ಮರೆತು ಮಕ್ಕಳು ಹೇಗೆ ಒಂದಾಗುತ್ತಾರೆ ಎಂಬುದನ್ನು ಈ ಕಾದಂಬರಿಯಲ್ಲಿ ತೋರಿಸಲು ಪ್ರಯತ್ನಿಸಿದ್ದಾರೆ. ಇದು ಬರಿ ಕತೆಯಲ್ಲ, ಬಡತನ ಸಿರಿತನದ ನಡುವಿನ ಸಂಘರ್ಷ,ನಮ್ಮ ನಡುವೆ ನಡೆದ,ನಡೆಯುತ್ತಿರುವ ನಿತ್ಯ ಸತ್ಯ.
ಈ ಕೃತಿಗೆ ಮಹೇಶ್ ಪಡುಮೂಲೆಯವರು ಮುನ್ನುಡಿ ಬರೆದಿದ್ದಾರೆ, ಒಬ್ಬ ಓದುಗ ಎಷ್ಟೊಂದು ಅದ್ಬುತವಾಗಿ ಮುನ್ನುಡಿ ಬರೆಯಬಹುದು ಎಂಬುದನ್ನು ಮಹೇಶ್‌ರವರು ತೋರಿಸಿಕೊಟ್ಟಿದ್ದಾರೆ.ತುಲು ಕನ್ನಡ ಲೇಖಕರಾದ ಉಮೇಶ್ ಶಿರಿಯಾ ಬೆನ್ನುಡಿ ಬರೆದು ಬೆನ್ನು ತಟ್ಟಿದ್ದಾರೆ,ಕಥಾ ಬಿಂದು ಪ್ರಕಾಶನದ ಮುಖೇನ ಕತೆಗೆ ಒಪ್ಪುವ ಅತ್ಯದ್ಭುತ ವಾದ ಮುಖಪುಟ ದೊಂದಿಗೆ ಮುದ್ರಣಗೊಂಡು ಓದುಗರ ಕೈ ಸೇರಲು ಕಾಯುತಿದೆ,ಇವರೆಲ್ಲರಿಗೂ ಒಡಲಾಳದ ಕೃತಜ್ಞತೆಗಳು.ಓದುಗರು ಈ ಬೋಟಿ ಕೃತಿಯನ್ನು ಕೊಂಡು ಓದಿ ಪ್ರೋತ್ಸಾಹಿಸಬೇಕಾಗಿದೆ















