ಜ್ಯೋತಿಗುಡ್ಡೆ: ಫೆ.27-ಮಾ.01, ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಉತ್ಸವ.

Coastal Bulletin
ಜ್ಯೋತಿಗುಡ್ಡೆ: ಫೆ.27-ಮಾ.01, ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಉತ್ಸವ.

ಬಂಟ್ವಾಳ :ತಾಲೂಕಿನ ಕಾರಣಿಕ ಪ್ರಸಿದ್ಧ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಜ್ಯೋತಿಗುಡ್ಡೆ ಇಲ್ಲಿ ಫೆ 27 ರಿಂದ ಮಾ 01ರ ವರೆಗೆ ವರ್ಷಾವಧಿ ಉತ್ಸವವು ಬ್ರಹ್ಮಶ್ರೀ ಕುಡುಪು ನರಸಿಂಹ ತಂತ್ರಿಗಳ ವೈದಿಕ ವಿಧಿ ವಿಧಾನಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ.

.27ರಂದು ಮಂಗಳವಾರ ಬೆಳಿಗ್ಗೆ ಗಂಟೆ 8-00ರಿಂದ : ದೇವತಾ ಕಾರ್ಯಕ್ರಮ, ತೋರಣ ಮುಹೂರ್ತ, ಗಣಹೋಮ, ನವಕ ಕಲಶ ಚಂಡಿಕಾ ಹೋಮ ಮಧ್ಯಾಹ್ನ ಗಂಟೆ 12-00ಕ್ಕೆ : ಚಂಡಿಕಾ ಹೋಮ ಪೂರ್ಣಾಹುತಿ, ಮಹಾಪೂಜೆ, ಪ್ರಸಾದ ವಿತರಣೆ,ಮಧ್ಯಾಹ್ನ ಗಂಟೆ 1-00ರಿಂದ ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ ಗಂಟೆ 8-00ಕ್ಕೆ : ಭಜನೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಗಂಟೆ 5-30ರಿಂದ

ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ, ಕಟೀಲು ಇವರಿಂದಶ್ರೀ ದೇವಿ ಮಹಾತ್ಮ. ಯಕ್ಷಗಾನ ಬಯಲಾಟ ನಡೆಯಲಿದೆ.

ಫೆ.28ರಂದು ಬುಧವಾರ ಮಧ್ಯಾಹ್ನ ಗಂಟೆ 12-30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ,ರಾತ್ರಿ ಗಂಟೆ 7-00ರಿಂದ ನೃತ್ಯಾಂಜಲಿ ಭರತನಾಟ್ಯ ಕೇಂದ್ರ ಜ್ಯೋತಿಗುಡ್ಡೆ ಇದರ ವಿದ್ಯಾರ್ಥಿಗಳಿಂದ"ನೃತ್ಯಾಂಜಲಿ”

ನಿರ್ದೇಶನ : ವಿದುಷಿ ಶ್ರೀಮತಿ ಮಲ್ಲಿಕಾ ಜ್ಯೋತಿಗುಡ್ಡೆ,ರಾತ್ರಿ ಗಂಟೆ 8-30ರಿಂದ ಧಾರ್ಮಿಕ ಸಭೆ ನಡೆಯಲಿದೆ, ಸಭಾಧ್ಯಕ್ಷತೆಯನ್ನು , ಶ್ರೀ ನಾರಾಯಣ ನಾಯ್ ಪೆರ್ನೆ, ಸಂಚಾಲಕರು, ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಜ್ಯೋತಿಗುಡ್ಡೆ

ಅತಿಥಿಗಳಾಗಿ :ಶ್ರೀ ಯು.ಟಿ.ಖಾದರ್, ಸಭಾಧ್ಯಕ್ಷರು, ಕರ್ನಾಟಕ ಸರಕಾರ,ಶ್ರೀ ರಾಜೇಶ್ ನಾಯ್ಕ ಉಳಿಪ್ಪಾಡಿಗುತ್ತು, ಶಾಸಕರು, ಬಂಟ್ವಾಳ ವಿಧಾನಸಭಾ ಕ್ಷೇತ್ರ,ಶ್ರೀ ಸಚಿನ್ ಕುಮಾರ್, ಜಿಲ್ಲಾ ಅಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ,ಶ್ರೀ ಜಗನ್ನಾಥ ಬಂಗೇರ, ನಿರ್ಮಲ್, ಮಾಜಿ ಮುಖ್ಯಮಂತ್ರಿಗಳ ನಿವೃತ್ತ ವಿಶೇಷ ಕರ್ತವ್ಯ ಅಧಿಕಾರಿ ಶ್ರೀ ಸುರೇಶ್ ಭವನ್‌ಗರ್, ಮೊತ್ತೇಸರರು, ಶ್ರೀ ಚೀರುಂಭ ಭಗವತಿ ಕ್ಷೇತ್ರ, ಉಳ್ಳಾಲ,ಶ್ರೀಮತಿ

ಗಾಯತ್ರಿ ಲೋಕೇಶ್, ಶಾಖಾ ವ್ಯವಸ್ಥಾಪಕರು, ದ.ಕ.ಜಿ ಕೇಂದ್ರ ಸಹಕಾರಿ ಬ್ಯಾಂಕು ನಿ, ಬಂಟ್ವಾಳ ಶಾಖೆ,ಶ್ರೀ ಜಗನ್ನಾಥ ಅಡಪ, ನಿರ್ದೇಶಕರು, ಉಬಾರ್ ಚೆಸ್ ಅಕಾಡೆಮಿ ಶ್ರೀಮತಿ ಚಿತ್ರಾವತಿ, ಉಪನ್ಯಾಸಕರು, ಸಂತ ಅಲೋಶಿಯಸ್ ಕಾಲೇಜು, ಮಂಗಳೂರು: ಶ್ರೀ ಸೋಮಪ್ಪ ಪೂಜಾರಿ ಮಾದೇಲು, ನಿವೃತ್ತ ಅಧಿಕಾರಿ, ವ್ಯವಸಾಯ ಸೇವಾ ಸಹಕಾರಿ ಸಂಘ, ನೇರಳಕಟ್ಟೆ ಶ್ರೀ ದಿನೇಶ್ ಪೂಜಾರಿ ಕಿಲ್ಲೂರು, ಅಧ್ಯಕ್ಷರು, ಶ್ರೀ ದುರ್ಗಾಪರಮೇಶ್ವರೀ ಸೇವಾ ಸಮಿತಿ, ಜ್ಯೋತಿಗುಡ್ಡೆ ಭಾಗವಹಿಸುವರು.

ಫೆ.29 ಗುರುವಾರ ಮಧ್ಯಾಹ್ನ ಗಂಟೆ 12-30ರಿಂದ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ರಾತ್ರಿ ಗಂಟೆ 7-00ರಿಂದ ಸ್ಥಳೀಯ ಅಂಗನವಾಡಿ ಪುಟಾಣಿಗಳಿಂದ ನೃತ್ಯ ಕಾರ್ಯಕ್ರಮ, ರಾತ್ರಿ ಗಂಟೆ 8-30ರಿಂದ ತರಿಕಿಟ ಕಲಾ ಕಮ್ಮಟ (ರಿ.) ಜ್ಯೋತಿಗುಡ್ಡೆ ಇದರ ಕಲಾವಿದರಿಂದ ಯಕ್ಷಗಾನ ಬಯಲಾಟ,ಪುಟಾಣಿ ಕಲಾವಿದರ ಕೂಡುವಿಕೆಯಲ್ಲಿ ಕುಬೇರ ಆತಿಥ್ಯ ಹಿರಿಯ ಕಲಾವಿದರು ಮತ್ತು ಸ್ಥಳೀಯ ಕಲಾವಿದರ ಕೂಡುವಿಕೆಯಲ್ಲಿ ತರಣಿಸೇನ ಕಾಳಗ ನಡೆಯಲಿದೆ.ನಿರ್ದೇಶನ ನಾಟ್ಯಗುರು ಶ್ರೀ ದಯಾನಂದ ಪಿಲಿಕೂರು.ಮಾ.01 ಶುಕ್ರವಾರ ರಾತ್ರಿ ಗಂಟೆ 8-00ರಿಂದ ಅಣ್ಣಪ್ಪ ಸ್ವಾಮಿ ನೇಮ ನಡೆಯಲಿರುವುದು ಎಂದು ಪ್ರ.ಕಾರ್ಯದರ್ಶಿ ಉದಯ ಕುಮಾರ ಜ್ಯೋತಿಗುಡ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕ್ಷೇತ್ರದಲ್ಲಿ ನಿರ್ಮಾಣ ಹಂತದಲ್ಲಿರುವ ಅನ್ನಛತ್ರ ಹಾಗೂ ಸಮುದಾಯ ಭವನಕ್ಕೆ ಸೇವಾ ರೂಪದಲ್ಲಿ ರೂ. 10,000/- ಕ್ಕಿಂತ ಮೇಲ್ಪಟ್ಟು ಧನಸಹಾಯ ಮತ್ತು ವಸ್ತು ರೂಪದಲ್ಲಿ ಸಹಕರಿಸಿದ ದಾನಿಗಳ ಹೆಸರನ್ನು ನಾಮಫಲಕದಲ್ಲಿ ಹಾಕಲಾಗುವುದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.

Leave a Comment