Coastal Bulletin

ಬಂಟ್ವಾಳ: ಕ್ರೆಡಿಟ್ ಕೋ-ಆಪರೇಟಿವ್‌ ಸೊಸೈಟಿ ನಿ‌.ಇದರ ನೂತನ ಲೊರೆಟ್ಟೊ ಶಾಖೆ ಜ. 05 ರಂದು ಗುರುವಾರ ಬೆಳಿಗ್ಗೆ ಗಂಟೆ 10:35ಕ್ಕೆ ಬಂಟ್ವಾಳ ತಾಲೂಕಿನ ಲೊರೆಟ್ರೊಪದವು ‘ಗ್ರೇಸ್’ ವಾಣಿಜ್ಯ ಸಂಕೀರ್ಣದಲ್ಲಿ ಶುಭಾರಂಭಗೊಳ್ಳಲಿದೆ ಎಂದು ಬ್ಯಾಂಕ್ ನ‌ ಅಧ್ಯಕ್ಷ ಬಿ.ರಮಾನಾಥ ರೈ ತಿಳಿಸಿದ್ದಾರೆ.

ಬ್ಯಾಂಕ್ ನ ಉದ್ಘಾಟನೆಯನ್ನು ಶ್ರೀ ಮಹಾಲಕ್ಷ್ಮೀ ಸೇವಾ ಪ್ರತಿಷ್ಠಾನ, ಶ್ರೀ ಕ್ಷೇತ್ರ ಮಾಣಿಲದ ಶ್ರೀ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿ ನೆರವೇರಿಸಿಲಿದ್ದಾರೆ.

ಭದ್ರತಾ ಕೊಠಡಿ

ಉದ್ಘಾಟನೆ ಗಣಕೀಕರಣ ಉದ್ಘಾಟನೆಯನ್ನು ಬಹು ಇರ್ಷಾದ್ ದಾರಿಮಿ ಅಲ್‌ಜಝರಿ ಮಿತ್ತಬೈಲ್‌ ಇವರು ಮಾಡಲಿದ್ದಾರೆ.

ಇವರ ಜೊತೆ ಸಮಾಜದ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Leave a Comment