Coastal Bulletin

ಮಂಗಳೂರು : ದ್ವಿಚಕ್ರ ವಾಹನಕ್ಕೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಹಿಂಬದಿ‌ ಸವಾರ ಬಾಲಕ ಮೃತಪಟ್ಟ ಘಟನೆ ಕಟೀಲು ಸಮೀಪದ ಉಲ್ಲಂಜೆಯಲ್ಲಿ ನಡೆದಿದೆ.

ಕಿಲ್ಲಂಜೆ ಶಾಲಾ ಸಮೀಪದ ನಿವಾಸಿ ಚರಣ್ ಮೃತ ಬಾಲಕ, ಕಟೀಲು‌ ಶಾಲೆಯಲ್ಲಿ 9 ನೇ ತರಗತಿ ಓದುತ್ತಿದ್ದ. ಸೋಮವಾರ ಸಂಜೆ ಶಾಲೆಯಿಂದ ಮನೆಗೆ ಹೊರಡುವಾಗ ಕಿನ್ನಿಗೋಳಿ ಕಡೆಗೆ ಹೋಗುತ್ತಿದ್ದ ದ್ವಿಚಕ್ರ ವಾಹನದಲ್ಲಿ ಲಿಫ್ಟ್ ಕೇಳಿದ್ದಾನೆ.

ದ್ವಿಚಕ್ರ ವಾಹನಲ್ಲಿ ಸವಾರಿ ಮಾಡುತ್ತಿದ್ದಾಗ ಕಿನ್ನಿಗೋಳಿನಿಂದ ಕಟೀಲುಗೆ ಬರುತ್ತಿದ್ದ ಬಸ್ ಉಲ್ಲಂಜೆ ಜುಮಾದಿ ಗುಡ್ಡೆಯ ಬಳಿ‌ ಸ್ಕೂಟರ್ ಗೆ

ಡಿಕ್ಕಿ ಹೊಡೆದಿದೆ. ಆ ಸಮಯದಲ್ಲಿ ಹಿಂಬದಿಯಲ್ಲಿ ಇದ್ದ ಬಾಲಕ ರಸ್ತೆಗೆ ಎಸೆಯಲ್ಲಟ್ಟು ಬಸ್ಸಿನ ಅಡಿಗೆ ಬಿದ್ದು ಸಾವನ್ನಪ್ಪಿದ್ದಾನೆ. ಆದರೆ ಸವಾರ ಎಡ ಬದಿಗೆ ಎಸೆಯಲ್ಲಟ್ಟ ಕಾರಣ ಬದುಕಿ ಉಳಿದಿದ್ದಾರೆ. ಮೃತ ಬಾಲಕನ ತಂದೆ ಗಣೇಶ್ ಕಿನ್ನಿಗೋಳಿ ಮಿಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಬಾಲಕ ತಂದೆ, ತಾಯಿ , ಸಹೋದರ ಮತ್ತು‌ ಸಹೋದರಿಯನ್ನು ಅಗಲಿದ್ದಾರೆ.

Leave a Comment