Coastal Bulletin

ಬಂಟ್ವಾಳ :ಶ್ರೀ ರಾಮ ವೈದ್ಯನಾಥ ಭಜನಾ ಮಂದಿರ ಸುಜೀರು ಪುದು ಇದರ ವತಿಯಿಂದ 73 ನೇ ವರ್ಷದ ಏಕಾಹ ಭಜನಾ ಮಹೋತ್ಸವ ಜ.6 ಮತ್ತು 7 ರಂದು ಭಜನಾ ಮಂದಿರದಲ್ಲಿ ನಡೆಯಲಿದೆ.

ಜ.6 ರಂದು ಬೆಳಗ್ಗೆ 6.45ಕ್ಕೆ ಸಂತ ಶ್ರೀ ಗೋಪಾಲ ಕುಲಾಲ್ ಸುಜೀರು ಕೊಡಂಗೆ ಇವರು ದೀಪ ಬೆಳಗಿಸುವ ಮುಖಾಂತರ ಏಕಾಹ ಭಜನೆಗೆ ಚಾಲನೆ ದೊರೆಯಲಿದೆ.ಮದ್ಯಾಹ್ನ 12 ಗಂಟೆಗೆ ಮಹಾಪೂಜೆಯ ನಂತರ ಅನ್ನಸಂತರ್ಪಣೆ ನಡೆಯಲಿದೆ.

268px;">

ಬಳಿಕೆ ಸಂಜೆ 7 ಕ್ಕೆ ಸಂಧ್ಯಾ ಪೂಜೆ ಆಗಲಿದೆ. ರಾತ್ರಿ 12 ಗಂಟೆಯ ಹೊತ್ತಿಗೆ ಮಹಾಪೂಜೆ ಜರಗಲಿದೆ. ಜ.7 ರಂದು 6.45 ಕ್ಕೆ ಏಕಾಹ ಭಜನಾ ಮಂಗಳಾಚರಣೆಯಾಗಿ ಪ್ರಸಾದ ವಿತರಣೆ ನಡೆಯಲಿದೆ ಎಂದು ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.

Leave a Comment