ಸಂತೋಷ್ ಕುಲಾಲ್ ನೆತ್ತರಕೆರೆ.

ಜೇನು ನೊಣ ಎಂದರೆ ಮಾರು ದೂರ ಓಡುವ ಜನಗಳ ಮದ್ಯೆ ಇಲ್ಲೊಂದು ಕುಟುಂಬ ಜೇನು ನೊಣವನ್ನು ಪ್ರೀತಿಯಿಂದ ತಮ್ಮ ಮುಖದಲ್ಲಿಯೇ ಗಡ್ಡದಂತೆ ಸಾಕಿ ಸಲಹಿ ಎಲ್ಲರನ್ನು ಆಶ್ಚರ್ಯಚಕಿತರನ್ನಾಗಿಸಿದ್ದಾರೆ. ಈ ಅಭೂತಪೂರ್ವ ಸಾಧನೆ ಮಾಡುತ್ತಿರುವವರು ದ ಕ ಜಿಲ್ಲೆಯ ಪುತ್ತೂರು ತಾಲೂಕಿನ ಮೂಡ್ನರು ಗ್ರಾಮದ ಮಾದರಿ ಕೃಷಿಕ ಕುಮಾರ ಪೆರ್ನಾಜೆ ಮತ್ತು ಅವರ ಪತ್ನಿ ಸೌಮ್ಯ ಪೆರ್ನಾಜೆ, ಮಕ್ಕಳಾದ ನಂದನ್ ಕುಮಾರ್, ಚಂದನ್ ಕುಮಾರ್ ಪೆರ್ನಾಜೆ, ಇವರ ಕುಟುಂಬವು ಕೂಡ ಜೇನಿನ ಗೂಡು ನಾವೆಲ್ಲ ಬೇರೆಯಾದರೆ ಏನಿಲ್ಲ ಎಂಬಂತೆ ಇದೆ.

ಈ ಕುಟುಂಬಕ್ಕೆ ಜೇನುನೊಣ ಎಂದರೆ ತುಂಬಾ ಪ್ರೀತಿ ಅವುಗಳಿಗೂ ಅಷ್ಟೇ, ಹಾರಿಬಂದು ಅವರ ಸುತ್ತ ಮುತ್ತುತ್ತವೆ ಅಷ್ಟೇ ಅಲ್ಲ ಮುಖದ ಮೇಲೆಲ್ಲಾ ಹರಿದಾಡುತ್ತವೆ ಗಡ್ಡದಂತೆ ಗೂಡು ಕಟ್ಟುತ್ತವೆ ಈ ಮೇಲಿನ ಚಿತ್ರದಲ್ಲಿ ನೋಡಿದರೆ ಅರ್ಥವಾಗುತ್ತದೆ

ಜೇನುತುಪ್ಪ ತಿನ್ನಲು ಮಾತ್ರ ತುಂಬಾ ಸಿಹಿ ಆದರೆ ಜೇನುನೊಣಗಳು ಮಾತ್ರ ತುಂಬಾ ಅಪಾಯಕಾರಿ ಜೇನ್ನೊಣಗಳು ಕಚ್ಚಿದರೆ ಮಾತ್ರ ಅದರಿಂದ ವಿಪರೀತ ನೋವಾಗುವುದು ಸಹಜ ಆದರೆ ಇಂತಹ ಜೇನುನೊಣಗಳು ಪೆರ್ನಾಜೆ ಯವರ ಅಸಲಿ ಪ್ರೀತಿಗೆ ಶರಣಾಗಿದೆ.

ಮೂಲತಃ ಕೃಷಿಕರಾದ ಕುಮಾರ್ ಪೆರ್ನಾಜೆ,ಜೇನು ನೊಣದ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿದ್ದು ಕಣ್ಣು-ಕಿವಿ ಮುಖದ ಮೇಲೆ ಹರಿದಾಡಿದರೂ ಏನು ಮಾಡುತ್ತಿಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ಮನಸ್ಸಿನ ನೆಮ್ಮದಿಗಾಗಿ ಆಧುನಿಕ ಬದುಕಿನ ಜಂಜಾಟದಲ್ಲಿ ಅಪಾಯಕಾರಿ ಜೇನುಗೂಡನ್ನು ನೋಡಿ ಬದುಕಬಹುದು ಎನ್ನುತ್ತಾರೆ ಪೆರ್ನಾಜೆ.


ಜನರು ಅಂಜಿಕೆಯಿಂದ ಜೇನುಗೂಡಿಗೆ ಬೆಂಕಿಯಿಟ್ಟು ನಾಶಗೊಳಿಸುವ ಸಂಸ್ಕೃತಿ ನಮ್ಮದಾಗದೇ ಅವುಗಳನ್ನು ನಮ್ಮಂತೆ ಬದುಕಲು ಬಿಡಿ, ಜೇನಿಗೋಸ್ಕರ ನಾಶ ಮಾಡಬೇಡಿ ಎನ್ನುವ ಕುಮಾರ ಪೆರ್ನಾಜೆ,ಭಾವನೆಯನ್ನು ಅರ್ಥಮಾಡಿಕೊಂಡು ಬದುಕಿದರೆ ಜೀವನ ಸರಳ ಸುಂದರ ಎನ್ನುತ್ತಾರೆ.

ಅವರು ಈಗಾಗಲೇ ಹಲವು ಬಾರಿ ಜೇನು ಗಡ್ಡವನ್ನು ಶಾಲಾ ಮಕ್ಕಳಿಗೆ, ರೋಟರಿಕ್ಲಬ್, ಕಾಲೇಜ್ ಮಕ್ಕಳಿಗೆ, ಸಾರ್ವಜನಿಕರಿಗೆ, ಹಲವಾರು ಕಡೆಗಳಲ್ಲಿ ಜೇನಿನ ಬಗ್ಗೆ ಸೈಡ್ ಶೋ ಮುಖಾಂತರ ಕಾರ್ಯಗಾರಗಳನ್ನು ನೀಡಿ ಜೇನು ನೊಣದ

ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

ರಾಷ್ಟ್ರೀಯ ಪ್ರಶಸ್ತಿ, ಕೃಷಿ ಪಂಡಿತ ಪ್ರಶಸ್ತಿ, ಆವಿಷ್ಕಾರಿ ರೈತ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಜಿಲ್ಲಾ ತಾಲೂಕು ಸನ್ಮಾನಗಳನ್ನು ಪಡೆದಿದ್ದು ಗ್ರಾಮೀಣ ಕಲಾ ಪ್ರತಿಭೆಗಳನ್ನು ಒಂದುಗೂಡಿಸಿ ಸ್ವರ ಸಿಂಚನ ಕಲಾತಂಡವನ್ನು ಕಟ್ಟಿ,ಹಲವಾರು ಕಡೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನಗೊಂಡಿದ್ದು,ಹಾಡುಗಾರಿಕೆ ಪ್ರತಿಭೆಗೆ ಅವಕಾಶ ನೀಡುತ್ತಿದ್ದಾರೆ.

ಹೊಸ ಸಂಶೋಧನೆ ಇವರ ಹವ್ಯಾಸವಾಗಿದ್ದು ಇದೀಗ ಹನಿ ಪಾರ್ಕ್ (ಜೇನಿನ ಕನಸಿನ ಮನೆ) ಮಾಡುತ್ತಿದ್ದಾರೆ. ಇವರ ಕುಟುಂಬವೇ ಜೇನು ಗಡ್ಡದ ಕುಟುಂಬ. ಇವರು ಕೃಷಿವಲಯದಲ್ಲಿ ಹೊಸ ಅನ್ವೇಷಣೆಯಲ್ಲಿ ತೊಡಗಿಸಿ, ಸೃಜನಾತ್ಮಕ ಕಾರ್ಯಗಳಿಂದ ವಿಶಿಷ್ಟ ಮತ್ತು ಗಮನಾರ್ಹ ಸಾಧನೆ ಮಾಡಿ, ಸಾಧಕತನ ಮೆರೆದು ಕೃಷಿಯ ಮಹತ್ಕಾರ್ಯವನ್ನು ಸಾಧಿಸಿ ಜೇನು ಗಡ್ಡ ಕಲೆಯ ಅನನ್ಯ ಸಾಧಕರಾಗಿದ್ದಾರೆ.

ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದರೆ ನಿಖರವಾದ ಗುರಿ, ಸತತ ಪ್ರಯತ್ನ, ತಾಳ್ಮೆ,ಇಚ್ಚಾಶಕ್ತಿ ಬಲು ಮುಖ್ಯ ಈ ನಿಟ್ಟಿನಲ್ಲಿ ಕುಮಾರ್ ಪೆರ್ನಾಜೆ ಕುಟುಂಬದೊಂದಿಗೆ ಕೂಡಿ ತನ್ನ ಕನಸನ್ನು ಸತತ ಪರಿಶ್ರಮದಿಂದ ನನಸು ಮಾಡಿದ್ದಾರೆ. ಅವರ ಮುಂದಿನ ಜೀವನ ಉಜ್ವಲವಾಗಲಿ ಎಂದು ಕೋಸ್ಟಲ್ ಬುಲೆಟಿನ್ ತಂಡದ ಹಾರೈಕೆ.

 ಜೇನು ನೊಣ ಕೃಷಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ:

ಕುಮಾರ್ ಪೆರ್ನಾಜೆ, ಪುತ್ತೂರು ಪೆರ್ನಾಜೆ ಮನೆ ಮತ್ತು ಅಂಚೆ ಪುತ್ತೂರು ತಾಲೂಕು ದ.ಕ. 5 7 4 2 2 3

ಮೊ:- 94 80 240 643.

Leave a Comment