ಬಂಟ್ವಾಳ ಧ್ವನಿವರ್ಧಕ ಮತ್ತು ದೀಪಾಲಂಕಾರ ಮಾಲಕರ ಜಿಲ್ಲಾ ಸಂಘದ ಮಹಾಸಭೆ. ಜಿಲ್ಲಾಧ್ಯಕ್ಷರಾಗಿ ಧನ್ ರಾಜ್ ಶೆಟ್ಟಿ ಪರಂಗಿಪೇಟೆ ಮರು ಆಯ್ಕೆ

Coastal Bulletin
ಬಂಟ್ವಾಳ ಧ್ವನಿವರ್ಧಕ ಮತ್ತು ದೀಪಾಲಂಕಾರ ಮಾಲಕರ ಜಿಲ್ಲಾ ಸಂಘದ ಮಹಾಸಭೆ. ಜಿಲ್ಲಾಧ್ಯಕ್ಷರಾಗಿ ಧನ್ ರಾಜ್ ಶೆಟ್ಟಿ ಪರಂಗಿಪೇಟೆ ಮರು ಆಯ್ಕೆ

ಬಂಟ್ವಾಳ :ಧ್ವನಿವರ್ಧಕ ಮತ್ತು ದೀಪಾಲಂಕಾರ ಮಾಲಕರ ಜಿಲ್ಲಾ ಸಂಘ (ರಿ) ದಕ್ಷಿಣ ಕನ್ನಡ ಜಿಲ್ಲೆ ಇದರ 2025 /2026 ಸಾಲಿನ ವಾರ್ಷಿಕ ಮಹಾಸಭೆಯು  ಸೆ.29 ರಂದು ಲಯನ್ಸ್ ಸೇವಾ ಮಂದಿರ ಬಿ. ಸಿ ರೋಡ್ ನಲ್ಲಿ ನಡೆಯಿತು.


ಈ ಸಂದರ್ಭದಲ್ಲಿ 2026/2028 ರ ಸಾಲಿನ ಜಿಲ್ಲಾ ಸಮಿತಿಗೆ ನೂತನ ಪಧಾದಿಕಾರಿಗಳ ಆಯ್ಕೆ ನಡೆಸಲಾಯಿತು, ಅಧ್ಯಕ್ಷರಾಗಿ ಧನ್ ರಾಜ್ ಶೆಟ್ಟಿ ಪರಂಗಿಪೇಟೆ ಇವರನ್ನು ಮರು ಆಯ್ಕೆ ನಡೆಸಲಾಯಿತು ಕಾರ್ಯದರ್ಶಿಯಾಗಿ ಸಂತೋಷ್ ಕುರಿಯಾಳ ಕೋಶಾಧಿಕಾರಿಯಾಗಿ ಮಾತುಕುಟ್ಟಿ ಧರ್ಮಸ್ಥಳ ಇವರನ್ನು ನೇಮಿಸಲಾಯಿತು.

ಈ ಸಭೆಯನ್ನು ಇಸ್ಮಾಯಿಲ್ ಬನಾರಿ ಸ್ವಾಗತಿಸಿದರು ಸಭೆಯಲ್ಲಿ ಜಿಲ್ಲಾ ಅಧ್ಯಕ್ಷರು ಧನ್ ರಾಜ್ ಶೆಟ್ಟಿ

ಪರಂಗಿಪೇಟೆ, ಗೌರವ ಅಧ್ಯಕ್ಷರು ರಾಜಶೇಖರ್ ಶೆಟ್ಟಿ ಕುಡ್ತಮುಗೇರು, ಕಾರ್ಯದರ್ಶಿ ಮಹೇಶ್ ಬೋಲಾರ್ ಹಾಗೂ ಕೋಶಾಧಿಕಾರಿ ಬೆನಟ್ಹ್ ಡಿಸ್ಲಿಲ್ವಾ ಮಂಗಳೂರು ಇವರ ಉಪಸ್ಥಿತಿಯಲ್ಲಿ ನಡೆಯಿತು ಹಾಗೂ ಬಂಟ್ವಾಳ, ಪುತ್ತೂರು, ಸುಳ್ಯ, ಬೆಳ್ತಂಗಡಿ, ಮಂಗಳೂರು ತಾಲೂಕಿನ ಪಧಾದಿಕಾರಿಗಳು ಉಪಸ್ಥಿತರಿದ್ದರು ಮುಂದಿನ ನೂತನ ಯೋಜನೆಗಳನ್ನು ರೂಪಿಸಲಾಯಿತು ಹಾಗೂ ಸದಸ್ಯರ ಸಮಸ್ಯೆ ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದಲಾಯಿತು.

ಲೋಹಿತ್ ಬ್ರಹ್ಮರಕೂಟ್ಲ ಸಭೆಗೆ ಧನ್ಯವಾದವಿತ್ತರು.

Leave a Comment