ಬಂಟ್ವಾಳ : ಫೋಟೋ ಗ್ರಾಫರ್ಸ್ ವತಿಯಿಂದ ಕ್ಷಯ ರೋಗಿಗೆ ಪೌಷ್ಟಿಕ ಆಹಾರ ವಿತರಣೆ.

Coastal Bulletin
ಬಂಟ್ವಾಳ : ಫೋಟೋ ಗ್ರಾಫರ್ಸ್ ವತಿಯಿಂದ ಕ್ಷಯ ರೋಗಿಗೆ ಪೌಷ್ಟಿಕ ಆಹಾರ ವಿತರಣೆ.

ಬಂಟ್ವಾಳ :ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಸಿಯೇಷನ್ ರಿ. ಬಂಟ್ವಾಳ ವಲಯದ ವತಿಯಿಂದ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಬಿ ಮೂಡ ಕೈಕಂಬ ದಲ್ಲಿ ಭಾರತ ಸರಕಾರ ದ ಅಕ್ಷಯ್ ಮಿತ್ರ ಯೋಜನೆ ಯಡಿಲ್ಲಿನ ಕ್ಷಯ ರೋಗಿಗೆ ಒಂದು ತಿಂಗಳ ಪೌಷ್ಟಿಕ ಆಹಾರ ಸಾಮಾಗ್ರಿಯನ್ನು ನೀಡಲಾಯಿತು.ಸುಮಾರು ಒಂದು ವರುಷದಿಂದ ಅಕ್ಷಯ್ ಮಿತ್ರ ಯೋಜನೆಯಡಿ ಒಬ್ಬ ವ್ಯಕ್ತಿಗೆ ಪ್ರತಿ ತಿಂಗಳು ಪೌಷ್ಟಿಕ ಆಹಾರ ಸಾಮಾಗ್ರಿಯನ್ನು ಫೋಟೋ ಗ್ರಾಫರ್ಸ್ ಅಸೋಸಿಯೇಷನ್ ವಿತರಿಸುತ್ತಾ ಬಂದಿದೆ.

ಈ ಸಂದರ್ಭ ದಲ್ಲಿ ವಲಯದ ಅಧ್ಯಕ್ಷ ರಾಜೇಂದ್ರ ಕೆ, ವೈದ್ಯಾಧಿಕಾರಿ ಡಾ, ಅಶ್ವಿನಿ ಬಾಲಕೃಷ್ಣ, ಮಾಜಿ ಅಧ್ಯಕ್ಷ ದಯಾನಂದ್ ಬಂಟ್ವಾಳ್,  ಜಿಲ್ಲಾ ಕ್ರೀಡಾಕಾರ್ಯದರ್ಶಿಹರೀಶ್ ಕುಂದರ್, ಗೌರವಾಧ್ಯಕ್ಷರಾದ ಕಿಶೋರ್

ಕುಮಾರ್, ಕೋಶಾಧಿಕಾರಿ ಕೃಷ್ಣ ರಾಜ್ ರಾವ್, ಉಪಾಧ್ಯಕ್ಷರಾದ ಹರೀಶ್ ನಾಟಿ, ಛಾಯಾಕಾರ್ಯದರ್ಶಿ ಪ್ರಶಾಂತ್ ಸದಸ್ಯ ರಾದ ವಿಕೇಶ್ ಬಂಟ್ವಾಳ ಹಾಗೂ ಆಸ್ಪತ್ರೆ ಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Comment