ಕಲ್ಲಡ್ಕ: ಸೆ,೩೦ ಶ್ರೀರಾಮ ಪದವಿ ಕಾಲೇಜಿನಲ್ಲಿ ಮಾನವಿಕ ಸಂಘ ಹಾಗೂ ವಾಣಿಜ್ಯ ಸಂಘದ ಸಹಯೋಗದಲ್ಲಿ ಸ್ವದೇಶಿ ಸಪ್ತಾಹದ ಪ್ರಯುಕ್ತ ದೀನದಯಾಳರ ಆರ್ಥಿಕ ದೃಷ್ಟಿ ಎಂಬ ವಿಚಾರದ ಕುರಿತಾಗಿ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಶ್ರೀರಾಮ ಪ್ರೌಢಶಾಲೆಯ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕರಾದ ರಾಧಾಕೃಷ್ಣ ಅಡ್ಯಂತಾಯರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಸ್ವದೇಶಿ ಸಪ್ತಾಹ ಪರಿಕಲ್ಪನೆ, ಹಿನ್ನೆಲೆ ಹಾಗೂ ಸ್ವದೇಶಿ ಆರ್ಥಿಕ ಬೆಳವಣಿಗೆಗೆ ದೇಶದ ಪ್ರಜೆಗಳಾಗಿ ನಮ್ಮ ಜವಾಬ್ದಾರಿಯ ಕುರಿತು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಟ್ಲ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಸದಸ್ಯರಾದ
ನಾಗೇಶ್, ಮಾನವಿಕ ಸಂಘದ ನಿರ್ದೇಶಕ ಗಂಧರ್ವ ಹಾಗೂ ವಾಣಿಜ್ಯ ಸಂಘದ ನಿರ್ದೇಶಕ ಹರ್ಷಿತ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಾಣಿಜ್ಯ ಸಂಘದ ಉಪಾಧ್ಯಕ್ಷೆ ಕುಮಾರಿ ಚೈತ್ರಾ ತೃತೀಯ ಬಿಕಾಂ ನಿರೂಪಿಸಿ, ಕುಮಾರಿ ಶ್ರದ್ಧಾ ತೃತೀಯ ಬಿಕಾಂ ಸ್ವಾಗತಿಸಿ, ಕುಮಾರಿ ಸಿಂಚನ ತೃತೀಯ ಬಿಕಾಂ ಧನ್ಯವಾದ ತಿಳಿಸಿದರು.
















