ತುಂಬೆ :ಗ್ರಾ ಪಂ ಆಶ್ರಯದಲ್ಲಿ :ಬೃಹತ್ ಸ್ವಚ್ಚತಾ ಆಂದೋಲನ ಕಾರ್ಯ ಕ್ರಮ.

Coastal Bulletin
ತುಂಬೆ :ಗ್ರಾ ಪಂ ಆಶ್ರಯದಲ್ಲಿ :ಬೃಹತ್ ಸ್ವಚ್ಚತಾ ಆಂದೋಲನ ಕಾರ್ಯ ಕ್ರಮ.

ಬಂಟ್ವಾಳ :ತುಂಬೆ ಗ್ರಾಮ ಪಂಚಾಯತ್ ಹಾಗೂ ಸಾಹಸ್ ಸಂಸ್ದೆಯ ಸಹಯೋಗದೊಂದಿಗೆ ಬಿ.ಎ. ಕೈಗಾರಿಕಾ ತರಬೇತಿ ಸಂಸ್ದೆ ಮತು ದ.ಕ.ಜಿ.ಪ. ಶಾಲೆ ತುಂಬೆ ಇವರ ಸಹಕಾರದೊಂದಿಗೆ ಬೃಹತ್ ಸ್ವಚ್ಚತಾ ಆಂದೋಲನ ಕಾರ್ಯ ಕ್ರಮವು ತುಂಬೆ ಬಿ.ಎ. ಮೈದಾನದಲ್ಲಿ ನಡೆಯಿತು.

ನಿಕಟ ಪೂರ್ವ ಅಧ್ಯಕ್ಷರಾದ ಪ್ರವೀಣ್ ಬಿ.ತುಂಬೆ ಪ್ರಾಸ್ತಾವಿಕವಾಗಿ ಮಾತಾಡಿದರು. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ಸ್ವಚ್ಚತೆ ಬಗ್ಗೆ ಜನರಿಗೆ ಅರಿವು ಮೂಡಿಸಿದರು. ಬಿ.ಎ. ತರಬೇತಿಯ ಪ್ರಾಂಶುಪಾಲರಾದ ನವೀನ್ ಕೆ.ಎಸ್.ರವರು ಸ್ವಚ್ಚತಾ ಹಿ ಸೇವೆಯ ಪ್ರತಿಜ್ಞಾ ವಿಧಿ ಬೋದಿಸಿದರು. ಆಂದೋಲನಕ್ಕೆ ಗ್ರಾಮದ ಅಧ್ಯಕ್ಷರಾದ ಜಯಂತಿ ಕೇಶವರವರು ಚಾಲನೆ ನೀಡಿದರು. ಸ್ವಚ್ಚತಾ ಜಾಥವು ಸುಮಾರು 3.5 ಕಿ.ಲೋಮೀಟರ್ ಜಾಥದ ಮುಖಾಂತರ ಗ್ರಾಮಸ್ಥರಿಗೆ ಅರಿವು ಮೂಡಿಸುವ ಕಾರ್ಯಕ್ರಮವು ನಡೆಯಿತು.ಗ್ರಾಮದ ಅಭಿವೃದ್ದಿ ಅಧಿಕಾರಿಯಾದ ಚಂದ್ರಾವತಿಯವರು ಸ್ವಚ್ಚತಾ ಆಂದೋಲನ ಕಾರ್ಯಕರ್ತರನ್ನು ಹಾಗೂ ಗಣ‍್ಯರನ್ನು ಸ್ವಾಗತಿಸಿದರು.

ತುಂಬೆ ರಾಮಲ್ ಕಟ್ಟೆಯಲ್ಲಿ ಸಮಾರೋಪ ಸಮಾರಂಭದಲ್ಲಿ ಹಸಿರು ದಳದ ನಾಗರಾಜರವರು ತ್ಯಾಜ್ಯ ವಿಂಗಡನೆಯ ಮಹತ್ವದ ಕುರಿತು ತಿಳಿಸಿದರು. ಸಾಹಸ್ ಸಂಸ್ಧೆಯ ಮೇಲ್ವಿಚಾರಕರಾದ ಸುದರ್ಶನ್ ರವರು ಸ್ವಚ್ಚತೆಯ ಬಗ್ಗೆ ಗ್ರಾಮದ ನಾಗರಿಕನ ಜವಾಬ್ದಾರಿಯ

ಪಾತ್ರದ ಬಗ್ಗೆ ತಿಳಿಸಿದರು. ಗ್ರಾಮದ ಉಪಾಧ್ಯಕ್ಷರಾದ ಗಣೇಶ್ ಸಾಲಿಯಾನ್ ರವರು ಗ್ರಾಮದ ಜನತೆಯಲ್ಲಿ ಸ್ವಚ್ಚತೆಯ ಬಗ್ಗೆ ಮನವಿ ಮಾಡಿಕೊಂಡರು.

ಪಂಚಾಯತ್ ಸದಸ್ಯರಾದ ಹೇಮಲತ ಜಿ ಪೂಜಾರಿ, ಮಹಮ್ಮದ್ ಝಹೂರ್, ಅರುಣ್ ಕುಮಾರ್ ಗಾಣದಲಚ್ಚಿಲ್, ಜಯಂತಿ ನಾಗೇಶ್, ಜಯಂತಿ ಶ್ರೀಧರ್, ಸಮಾಜ ಸವೇಕರಾದ ಸದಾಶಿವ ಡಿ. ತುಂಬೆ , ಹಿರಿಯರಾದ ಗಂಗಾಧರ ಅಮೀನ್ ರಾಮಲ್ ಕಟ್ಟೆ, ಪ್ರಮುಖರಾದ ಹರೀಶ್ ರೊಟ್ಟಿಗುಡ್ಡೆ, ಜಗದೀಶ್ ಗಟ್ಟಿ, ನವೀನ್ ಕೊಟ್ಟಿಂಜ , ರಂಜಿತ್ ಮಜಿ, ಗೋಪಾಲ ಕೃಷ್ಣ ಕೊಟ್ಟಿಂಜ, ಶ್ರೀಧರ್ ರಾಮಲ್ ಕಟ್ಟೆ, ಹಾಗೂ ತುಂಬೆ ಪಂಚಾಯತ್ ಸಿಬ್ಬಂದಿಗಳಾದ ಪೂರ್ಣಿಮಾ ಮತ್ತು ಬಬಿತ , ಗ್ರಂಥಾಲಯ ಮೇಲ್ವಿಚಾರಕಿ ಅಶ್ವಿನಿ , ಚಂದ್ರಾವತಿ LCRP ,ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, , ಸಾಹಸ್ ಎನ್.ಜಿ.ಓ ಸೂರಜ್.ಕೆ ಮತ್ತಿತರರು ಉಪಸ್ಥಿತರಿದ್ದರು

Leave a Comment