ಬಂಟ್ವಾಳ :ಶ್ರೀ ಶಾರದಾ ಸೇವಾ ಪ್ರತಿಷ್ಠಾನ (ರಿ) ತುಂಬೆ ಇದರ ಆಶ್ರಯದಲ್ಲಿ ಅಗಲಿದ ಸಂಸ್ಥೆಯ ಹಿರಿಯ ಚೇತನಗಳಾದ ದಿ.ಹರಿನಾಥ ಭಂಡಾರಿ ಹಾಗೂ ದಿ.ಮಂಜು ವಿಟ್ಲ ಇವರ ಆತ್ಮಕ್ಕೆ ಚಿರಶಾಂತಿ ಕೋರುವ ಬಗ್ಗೆ ನುಡಿ ನಮನ ಕಾರ್ಯಕ್ರಮ ಹಾಗೂ 23ನೇ ವರ್ಷದ ಶ್ರೀ ಶಾರದಾ ಮಹೋತ್ಸವದ ಮಹಾಸಭೆ ನಡೆಯಿತು.
ಈ ಸಂದರ್ಭದಲ್ಲಿ 23ನೇ ವರ್ಷದ ಶ್ರೀ ಶಾರದಾ ಮಹೋತ್ಸವದ ನೂತನ ಸಮಿತಿ ರಚನೆಯಾಗಿದ್ದು, ಅಧ್ಯಕ್ಷರಾಗಿ ಜಗದೀಶ್ ಕಡೆಗೋಳಿ, ಕಾರ್ಯದರ್ಶಿ ವಿನೋದ್ ಬೊಳ್ಳಾರಿ, ಕೋಶಾಧಿಕಾರಿ ಮನೋಹರ್ ಕೊಟ್ಟಾರಿ, ಉಪಾಧ್ಯಕ್ಷರಾಗಿ ಸದಾನಂದ ಕೋಡಿಯಡ್ಕ, ನಾಗೇಶ್ ಮಜಿ, ವಸಂತಿ ರಾಮಲ್ ಕಟ್ಟೆ, ಪ್ರಮೀಳಾ ದೇವದಾಸ್ ಕೊಟ್ಟಿಂಜ, ಜೊತೆ ಕಾರ್ಯದರ್ಶಿಗಳಾಗಿ ಶಿವಪ್ರಸಾದ್ ತುಂಬೆ, ಸೋಮಶೇಖರ್
ಪರ್ಲಕ್ಕೆ, ಸುಮಂಗಳಾ ಶ್ರೀಧರ್ ಬೊಳ್ಳಾರಿ, ಲತಾ ದಿವಾಕರ್ ಮುದಲ್ಮೆ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಶೋಕ್ ರಾಮಲ್ ಕಟ್ಟೆ, ಹರೀಶ್ ಕುಮಾರ್ ಗಾಣದಲಚ್ಚಿಲು, ಅನಂತ ವಿಜಯ ಪಡ್ಪು, ದಿನೇಶ್ ಮಜಿ, ಶ್ರೀನಿವಾಸ ಪರ್ಲಕ್ಕೆ, ಪ್ರಭಾವತಿ ಬೊಳ್ಳಾರಿ, ಜಲಜಾಕ್ಷಿ ವಿಜಯ್ ಕೋಟ್ಯಾನ್, ಶ್ವೇತಾ ವಿಜಯ್ ಕುಮಾರ್ ಕಜೆಕಂಡ, ಶುಭ ಗಣೇಶ್ ಸುವರ್ಣ ಬೊಳ್ಳಾರಿ, ಲಕ್ಷ್ಮೀ ಮಹೇಶ್ ಬೊಳ್ಳಾರಿ ಆಯ್ಕೆಯಾಗಿರುತ್ತಾರೆ.
















