ರಾಜಕೀಯ ಇಚ್ಚಾಶಕ್ತಿಯ ಕೊರತೆಯಿಂದ ಕಾವೇರಿ ನೀರು ತಮಿಳುನಾಡಿಗೆ ಬಿಡುವಂತಾಗಿದೆ - ಮುಂದಿನ ದಿನಗಳಲ್ಲಿ ಉಗ್ರ ಹೋರಾಟಮಾಡಲಾಗುವುದು ಹೋರಾಟಗಾರರ ಎಚ್ಚರಿಕೆ.

Coastal Bulletin
ರಾಜಕೀಯ ಇಚ್ಚಾಶಕ್ತಿಯ ಕೊರತೆಯಿಂದ ಕಾವೇರಿ ನೀರು ತಮಿಳುನಾಡಿಗೆ ಬಿಡುವಂತಾಗಿದೆ - ಮುಂದಿನ ದಿನಗಳಲ್ಲಿ ಉಗ್ರ ಹೋರಾಟಮಾಡಲಾಗುವುದು ಹೋರಾಟಗಾರರ ಎಚ್ಚರಿಕೆ.

ಹುಳಿಯಾರು: ಕಾವೇರಿ ಕರ್ನಾಟಕದ ಸ್ವತ್ತು ಕರ್ನಾಟಕದವರಿಗೆ ಕುಡಿಯಲು ನೀರಿಲ್ಲದಿದ್ದರೂ ತಮಿಳುನಾಡಿಗೆ ನೀರು ಹರಿಸುತ್ತಿರುವುದು ರಾಜಕೀಯ ಇಚ್ಚಾಶಕ್ತಿಯ ಕೊರತೆಯಾಗಿದ್ದು, ಇಂತ ರಾಜಕೀಯ ನಾಯಕರಿಗೆ ಮುಂದಿನ ದಿನಗಳಲ್ಲಿ ಪಾಠ ಕಲಿಸಬೇಕಾಗುವುದೆಂದು ಪ್ರತಿಭಟನಾನಿರತ ಕರವೇ ಸದಸ್ಯರು ಎಚ್ಚರಿಕೆ ನೀಡಿದ್ದಾರೆ.

ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವುದನ್ನು ವಿರೋಧಿಸಿ ಎಲ್ಲಾ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿದ್ದು ಹುಳಿಯಾರಿನಲ್ಲಿ ಕರವೇ ಯಿಂದ ಪ್ರಮುಖ ಬೀದಿಗಳಲ್ಲಿ ಬೈಕ್‌ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ನಾಡ ಕಛೇರಿಗೆ ತೆರಳಿ ಕರ್ನಾಟಕ ಜನತೆಗೆ ಕುಡಿಯಲು ನೀರಿಲ್ಲದಿದ್ದರೂ ತಮಿಳುನಾಡಿಗೆ ನೀರು ಹರಿಸುತ್ತಿರುವುದು ಖಂಡನೀಯ.

ನಮ್ಮ ನಾಯಕರ ಇಚ್ಚಾಶಕ್ತಿಯ ಕೊರತೆಯಿಂದ ಕಾವೇರಿ ತಮಿಳು ನಾಡಿಗೆ ಹರಿಯುತ್ತಿದೆ. ಇದು ಮುಂದುವರೆದರೆ ಉಗ್ರ ಹೋರಾಟದ ಹಾದಿ ತುಳಿಯುವ ಎಚ್ಚರಿಕೆ ಸಂದೇಶವನ್ನು ನಾಡ ಕಚೇರಿಯ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ನೀಡಿದರು. ಕರವೇ ಅಧ್ಯಕ್ಷ ಬೇಕ್ರಿ ಪ್ರಕಾಶ್, ಚನ್ನಬಸವಯ್ಯ, ಗವಿರಂಗನಾಥ್‌ ಗೌಡಿ, ದಿವಾಕರ, ರಘು, ಮಂಜು ಮುಂತಾದವರು ಭಾಗವಹಿಸಿದ್ದರು.

Leave a Comment