Coastal Bulletin

ಮಂಗಳೂರು: ಉಳ್ಳಾಲ, ಕೋಟೆಕಾರು ಸಮೀಪದ ಮಾಡೂರಿನಲ್ಲಿ ಕೋಣವನ್ನು ಗುಂಡಿಕ್ಕಿ ಕೊಂದ ಪ್ರಕರಣದಲ್ಲಿ ತೋಟದ ಮಾಲೀಕ ಸೇರಿದಂತೆ ಏಳು ಮಂದಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

ತೋಟದ ಮಾಲೀಕ ಜಯರಾಮ ರೈ (58), ಆತನಿಗೆ ಸಹಕರಿಸಿದ್ದ ಮಲ್ಲೂರು ನಿವಾಸಿ ಉಮರ್(37) ಕೋಟೆಕಾರಿನ ಉಮ್ಮರ್ ಫಾರೂಕ್ (42), ಸೋಮೇಶ್ವರದ ನಿವಾಸಿಗಳಾದ ಮಹಮ್ಮದ್ ಹುಸೇನ್ (26), ಮಹಮ್ಮದ್ ಕಲಂದರ್ (43), ಮಲ್ಲೂರಿನ ಮೊಹಮ್ಮದ್ ಸಿನಾನ್ (22), ಸೋಮೇಶ್ವರದ ಇಲ್ಯಾಸ್ (22) ಬಂಧಿತ ಅರೋಪಿಗಳು.

ಬಂಧಿತರಿಂದ ಪಿಕಪ್ ವಾಹನ, ಸ್ಕೂಟರ್, ಬಂದೂಕು, ಚೂರಿ, ಒಂದು ಜೀವಂತ ಗುಂಡು, ಹಗ್ಗ, ಮಾಂಸ ಮಾಡಲು ಬಳಸುವ ಹಲಗೆ, ಪ್ಲಾಸ್ಟಿಕ್ ಚೀಲಗಳು ಸೇರಿ ಇತರ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಘಟನೆ ಹಿನ್ನೆಲೆ

ನಿನ್ನೆ ಸಂಜೆ ಬೀಡಾಡಿ

ಕೋಣವೊಂದನ್ನು ಮಾಡೂರಿನ ಬಲ್ಯ ಎಂಬಲ್ಲಿ ಗುಂಡಿಕ್ಕಿ ಬಳಿಕ ಕತ್ತು ಕೊಯ್ದು ಹತ್ಯೆ ಮಾಡಲಾಗಿತ್ತು. ಘಟನೆ ಬೆಳಕಿಗೆ ಬರುತ್ತಿದ್ದಂತೆ ಹಿಂದೂ ಸಂಘಟನೆಯ ಕಾರ್ಯಕರ್ತರು ಕೋಣವನ್ನು ಕೊಂದಿರುವ ಬಗ್ಗೆ ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದರು.

ಪೊಲೀಸರು ಬಂದು ತನಿಖೆ ನಡೆಸಿದಾಗ, ತೋಟದ ಮಾಲೀಕ ಜಯರಾಮ್ ರೈ, ಕೋಣದ ಉಪಟಳ ತಾಳಲಾರದೆ ಕೆಲವು ಯುವಕರೊಂದಿಗೆ ಕೋಣವನ್ನು ಹತ್ಯೆಗೈದು ಬಳಿಕ ಮಾಂಸ ಮಾಡಿ ಒಯ್ಯಲು ಪ್ಲಾನ್ ಮಾಡಿದ್ದ ಎಂದು ತಿಳಿದು ಬಂದಿದೆ. ಗುಡ್ಡದಲ್ಲಿ ಗುಂಡಿನ ಸದ್ದು ಕೇಳಿದ ಸ್ಥಳೀಯರು, ಸಂಘಟನೆಯ ಕಾರ್ಯಕರ್ತರ ಗಮನಕ್ಕೆ ತಂದಿದ್ದರು.

Leave a Comment