ಟೋಕಿಯೊ ಪ್ಯಾರಾಲಿಂಪಿಕ್ಸ್ ನ ಜಾವೆಲಿನ್ (ಎಫ್ 64) ಪಂದ್ಯದಲ್ಲಿ ಭಾರತದ ಸುಮಿತ್ ಆಂಟಿಲ್ ಚಿನ್ನಕ್ಕೆ ಮುತ್ತಿಕ್ಕಿದ್ದಾರೆ.ಟೋಕಿಯೊ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಇದು ಭಾರತಕ್ಕೆ ಎರಡನೇ ಚಿನ್ನದ ಪದಕವಾಗಿದ್ದು ಪದಕಗಳ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ.
ಇಂದು ಅವನಿ ಲೇಖಾರಾ ಟೋಕಿಯೊದಲ್ಲಿ ಶೂಟಿಂಗ್‌ನಲ್ಲಿ ದೇಶಕ್ಕೆ ಮೊದಲ ಚಿನ್ನದ ಪದಕವನ್ನು ನೀಡಿದ್ದರು.ಸುಮಿತ್ ತನ್ನದೇ ವಿಶ್ವದಾಖಲೆಯನ್ನು ಒಂದಲ್ಲ, ಎರಡಲ್ಲ, ಮೂರು ಬಾರಿ ಇಲ್ಲಿಯೇ ಮುರಿದರು. ಈ ಸಂದರ್ಭದಲ್ಲಿ, ಪ್ರತಿ ಆಟಗಾರನಿಗೆ ಆರು ಪ್ರಯತ್ನಗಳನ್ನು ನೀಡಲಾಗುತ್ತದೆ. ಸುಮಿತ್ ಮೊದಲ ಪ್ರಯತ್ನದಲ್ಲಿ 66.95 ಮೀಟರ್ ದೂರ ಜಾವೆಲಿನ್ ಎಸೆದರು. ಈ ಥ್ರೋ ಮೂಲಕ, ಅವರು 2019 ರಲ್ಲಿ
ದುಬೈನಲ್ಲಿ ನಿರ್ಮಿಸಿದ ತನ್ನ ವಿಶ್ವ ದಾಖಲೆಯನ್ನು ತಾವೇ ಮುರಿದರು. ಎರಡನೇ ಥ್ರೋನಲ್ಲಿ, ಅವರು 68.08 ಮೀಟರ್ ಎಸೆತದೊಂದಿಗೆ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದರು. ಮೂರನೇ ಮತ್ತು ನಾಲ್ಕನೇ ಪ್ರಯತ್ನಗಳ ಎಸೆತಗಳು ವಿಶ್ವ ದಾಖಲೆಗಿಂತ ಕೊಂಚ ಕಡಿಮೆ ಇದ್ದವು. ಐದನೇ ಪ್ರಯತ್ನದಲ್ಲಿ 68.55 ಮೀಟರ್ ಎಸೆತದೊಂದಿಗೆ ಅವರು ಮೂರನೇ ಬಾರಿಗೆ ವಿಶ್ವ ದಾಖಲೆ ನಿರ್ಮಿಸಿದರು.















