ಬಂಟ್ವಾಳ :ಭಾರತ ಪುಣ್ಯ ಭೂಮಿಯಾಗಿ ರುವುದರಿಂದ ಭಗವಂತನ ಅವತಾರಗಳು ಇಲ್ಲಿಯೇ ನಡೆದಿವೆ.ಧರ್ಮ ರಕ್ಷಕನಾದ ಶ್ರೀ ಕೃಷ್ಣನ ಜೀವನವೇ ನಮಗೆಲ್ಲ ಆದರ್ಶ ಎಂದು ಯಕ್ಷ ಕಲಾ ಸಂಘಟಕ ಜನಾರ್ಧನ ಅಮ್ಮುಂಜೆ ಹೇಳಿದರು.
ಅವರು ಶ್ರೀ ಆಂಜನೇಯ ದೇವಸ್ಥಾನ ವಿಜಯನಗರ ಫರಂಗಿಪೇಟೆ ಇಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಡೆದ ಸಾರ್ವಜನಿಕ ಮೊಸರು ಕುಡಿಕೆ ಉತ್ಸವದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಂಪ ಸದಾನಂದ ಆಳ್ವಾ, ಗಡಿಕಾರರು ಶ್ರೀ ಉಳ್ಳಾಕ್ಲು ಮಗೃಂತಾಯ ದೈವಸ್ಥಾನ
ಅರ್ಕುಳ ವಹಿಸಿದ್ದರು. ವೇದಿಕೆಯಲ್ಲಿ ಉತ್ಸವ ಸಮಿತಿ ಅಧ್ಯಕ್ಷ ಮನೋಜ್ ಬಂಗೇರ ತುಪ್ಪೆಕಲ್ಲು, ಆಡಳಿತ ಸಮಿತಿಯ ಚಂದ್ರಶೇಖರ್ ಗಾಂಭೀರ ಸುಜೀರ್ ಗುತ್ತು ಉಪಸ್ಥಿತರಿದ್ದರು.
ಕು.ಧನ್ಯ ಭಟ್ ಕಲ್ಲತಡಮೆ ಪ್ರಾರ್ಥಿಸಿದರು.ತೇವು ತಾರಾನಾಥ ಕೊಟ್ಟಾರಿ ಸ್ವಾಗತಿಸಿದರು,ದಿನಕರ ಮಂಟಮೆ, ಕರುಣಾಕರ ಕೊಟ್ಟಾರಿ ಸಹಕರಿಸಿ, ಜಗದೀಶ್ ಕಡೆಗೋಳಿ ಕಾರ್ಯಕ್ರಮ ನಿರೂಪಿಸಿದರು.















