ಬಾಂಗ್ಲಾದೇಶದ ಅವಾಮಿ ಲೀಗ್ ನಾಯಕನ ಶವ ಭಾರತದ ಗಡಿಯಲ್ಲಿ ಪತ್ತೆ

Coastal Bulletin
ಬಾಂಗ್ಲಾದೇಶದ ಅವಾಮಿ ಲೀಗ್ ನಾಯಕನ ಶವ ಭಾರತದ ಗಡಿಯಲ್ಲಿ ಪತ್ತೆ

ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಸರ್ಕಾರದ ಪತನದ ಬಳಿಕ ಓಡಿ ಹೋಗಿದ್ದ ಅವಾಮಿ ಲೀಗ್​ನ ನಾಯಕ ಶವವಾಗಿ ಪತ್ತೆಯಾಗಿದ್ದಾರೆ. ಬಾಂಗ್ಲಾದೇಶದ ಗಡಿಯಲ್ಲಿರುವ ಮೇಘಾಲಯದ ಜೈನ್ತಿಯಾ ಹಿಲ್ಸ್ ಜಿಲ್ಲೆಯಲ್ಲಿ ಅವಾಮಿ ಲೀಗ್ ನಾಯಕನ ಕೊಳೆತ ಶವ ಪತ್ತೆಯಾಗಿದೆ.

ಮೇಘಾಲಯ ಪೊಲೀಸರು ಅವಾಮಿ ಲೀಗ್ ನಾಯಕ ಇಶಾಕ್ ಅಲಿ ಖಾನ್ ಪನ್ನಾ ಅವರ ಅರೆ ಕೊಳೆತ ದೇಹವನ್ನು ಜೈನ್ತಿಯಾ ಹಿಲ್ಸ್ ಜಿಲ್ಲೆಯ ತೋಟದಿಂದ ವಶಪಡಿಸಿಕೊಳ್ಳಲಾಗಿದೆ. ಆಗಸ್ಟ್ 26 ರಂದು ಸಂಜೆ ಭಾರತ-ಬಾಂಗ್ಲಾದೇಶ ಗಡಿಯಿಂದ 1.5 ಕಿಮೀ ದೂರದಲ್ಲಿ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪನ್ನಾ ಅವರ ಪಾಸ್‌ಪೋರ್ಟ್ ಮೂಲಕ ಗುರುತಿಸಲಾಗಿದೆ ಎಂದು ಎಸ್‌ಪಿ ಗಿರಿ ಪ್ರಸಾದ್

ತಿಳಿಸಿದ್ದಾರೆ.

ಮೃತ ಅವಾಮಿ ಲೀಗ್ ನಾಯಕ ಯಾರು? ಬಾಂಗ್ಲಾದೇಶ ಛತ್ರ ಲೀಗ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಮತ್ತು ಪಿರೋಜ್‌ಪುರ ಜಿಲ್ಲೆಯ ಅವಾಮಿ ಲೀಗ್‌ನ ಪ್ರಮುಖ ಸದಸ್ಯರಾಗಿರುವ ಪನ್ನಾ ಅವರು ಆಗಸ್ಟ್ 5 ರಂದು ಶೇಖ್ ಹಸೀನಾ ಸರ್ಕಾರ ಪತನದ ನಂತರ ಪರಾರಿಯಾಗಿದ್ದರು ಎಂದು ಮೂಲಗಳು ತಿಳಿಸಿವೆ.ಗಡಿ ದಾಟಲು ಪ್ರಯತ್ನಿಸುತ್ತಿರುವಾಗ ಪನ್ನಾ ಹೃದಯ ಸ್ತಂಭನಕ್ಕೆ ಒಳಗಾಗಿರಬಹುದು ಎಂದು ಪ್ರಾಥಮಿಕ ವರದಿಗಳು ಸೂಚಿಸಿವೆ.

Leave a Comment