ಫರಂಗಿಪೇಟೆ:ಬಂಟರ ಸಂಘದ ನೂತನ ಪದಾದಿಕಾರಿಗಳ ಪದಗ್ರಹಣ ಮತ್ತು ಆಟಿದ ಗಮ್ಮತ್ ಕಾರ್ಯಕ್ರಮ.

Coastal Bulletin
ಫರಂಗಿಪೇಟೆ:ಬಂಟರ ಸಂಘದ ನೂತನ ಪದಾದಿಕಾರಿಗಳ ಪದಗ್ರಹಣ ಮತ್ತು ಆಟಿದ ಗಮ್ಮತ್ ಕಾರ್ಯಕ್ರಮ.

ಬಂಟ್ವಾಳ :ಫರಂಗಿಪೇಟೆ ವಲಯ ಬಂಟರ ಸಂಘದ ನೂತನ ಅಧ್ಯಕ್ಷ ಹಾಗೂ ಪದಾದಿಕಾರಿಗಳ ಪದಗ್ರಹಣ ಮತ್ತು ಆಟಿದ ಗಮ್ಮತ್ ಕಾರ್ಯಕ್ರಮವು ಬಂಟವಾಳದ ಬಂಟರ ಭವನದಲ್ಲಿ ಜರಗಿತು.

ಬಂಟ ಸಮುದಾಯ ಇತರ ಸಮುದಾಯದವರನ್ನು ಗೌರವಿಸುವ ಸಮಾಜ ಅದಕ್ಕಾಗಿಯೇ ನಮಗೆ ಇತರ ಸಮಾಜದವರು ಕೂಡ ನಾಯಕತ್ವ ವನ್ನು ನೀಡುತ್ತಾರೆ. ನಾವಾಗಿಯೇ ನಾಯಕತ್ವವನ್ನು ಪಡೆದಿರುವುದಲ್ಲ ಇತರರು ನಮೆಗೆ ನೀಡಿರುವುದೆಂದು ಮಾಜಿ ಸಚಿವರಾದ ಬಿ ರಮಾನಾಥ ರೈಯವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

 ಬಂಟ ಸಮುದಾಯ ಸಾಹಸಿ ಪ್ರವೃತ್ತಿ ಯವರು ಎಲ್ಲಾ ರಂಗಗಳಲ್ಲಿಯೂ ತನ್ನ ವಿಶೇಷ ಛಾಪು ಮೂಡಿಸಿದ್ದಾರೆ ಎಂದು ಶಶಿ ಕ್ಯಾಟರರ್ಸ್ ಬರೋಡ ಎಂಡಿ ಶಶಿಧರ ಶೆಟ್ಟಿ ಬರೋಡ ರವರು ಭಾಗವಹಿಸಿ ಮಾತನಾಡಿದರು.

 ವೇದಿಕೆಯಲ್ಲಿ ಮಂಗಳೂರು ತಾಲೂಕು ಬಂಟರ ಸಂಘದ ಅಧ್ಯಕ್ಷರಾದ ನಿಟ್ಟೆ ಗುತ್ತು ರವಿರಾಜ್ ಶೆಟ್ಟಿ ಬಂಟ್ವಾಳ ತಾಲೂಕು ಬಂಟರ ಸಂಘದ ನೂತನ ಅಧ್ಯಕ್ಷರಾದ ಜಗನ್ನಾಥ ಚೌಟ ಮಾಣಿ ಬದಿಗುಡ್ಡೆ ,ನೂತನ ಪ್ರದಾನ ಕಾರ್ಯದರ್ಶಿ ಸದಾನಂದ ಆಳ್ವ ಕಂಪ ,ನೂತನ ಉಪಾಧ್ಯಕ್ಷರಾದ ಐತಪ್ಪ ಆಳ್ವ ಸುಜೀರು ಗುತ್ತು , ತುಳು ಅಕಾಡೆಮಿ ಮಾಜಿ ಸದಸ್ಯೆ ವಿಜಯ ಶೆಟ್ಟಿ

ಸಾಲೆತೂರು , ಬಂಟರ ಸಂಘ ಫರಂಗಿಪೇಟೆ ವಲಯದ ಗೌರವಾಧ್ಯಕ್ಷರಾದ ಸುಂದರ ಶೆಟ್ಟಿ ಕಲ್ಲತಡಮೆ , ಅಧ್ಯಕ್ಷರಾದ ದೇವದಾಸ್ ಶೆಟ್ಟಿ ಕೊಡ್ಮನ್ , ಕಾರ್ಯದರ್ಶಿ ಗಿರೀಶ್ ಶೆಟ್ಟಿ ಕುಂಪನಮಜಲು ,ಕೋಶಾಧಿಕಾರಿ ಪ್ರತಾಪ್ ಆಳ್ವ ಸುಜೀರು ಗುತ್ತು , ನೂತನ ಸಮಿತಿಗೆ ಅಧ್ಯಕ್ಷರಾಗಿ ವಿಶ್ವನಾಥ ಶೆಟ್ಟಿ ಕೊಟ್ಟಿಂಜ ಗುತ್ತು , ಕಾರ್ಯದರ್ಶಿ ಹರಿಶ್ಚಂದ್ರ ಆಳ್ವ , ಕೋಶಾದಿಕಾರಿ ಜಿ ಕೃಷ್ಣ ಶೆಟ್ಟಿ ಡೆಮುಂಡೆ , ಜತೆ ಕಾರ್ಯದರ್ಶಿ ದೇವದಾಸ್ ಶೆಟ್ಟಿ ತುಪ್ಪೆಕಲ್ಲು , ಸಂಘಟನಾ ಕಾರ್ಯದರ್ಶಿ ದಿನೇಶ್ ಶೆಟ್ಟಿ ಕೊಟ್ಟಿಂಜ , ಪದಗ್ರಹಣ ಸ್ವೀಕರಿಸಿದರು , ಮಹಿಳಾ ವಿಭಾಗದ ಅಧ್ಯಕ್ಷೆ ದೀಕ್ಷಾ ಎನ್ ಆಳ್ವ , ಕಾರ್ಯದರ್ಶಿ ಪವಿತಾ ರೈ , ಉಪಸ್ಥಿತರಿದ್ದರು . ನೂತನ ಗೌರವಾಧ್ಯಕ್ಷರಾದ ನವೀನ್ ಶೆಟ್ಟಿ ಮುಂಡಾಜೆ ಗುತ್ತು ಪ್ರಾಸ್ತಾವಿಕ ಭಾಷಣ ದೊಂದಿಗೆ ಸ್ವಾಗತಿಸಿದರು ಹರಿಶ್ಚಂದ್ರ ಆಳ್ವ ವಂದಿಸಿದರು , ಸುಮಾ ಎನ್ ಶೆಟ್ಟಿ ಮುಂಡಾಜೆಗುತ್ತು ನಿರೂಪಿಸಿದರು ನಾಗರತ್ನ ರೈ ಸಹಕರಿಸಿದರು.

Leave a Comment