ಮಂಗಳೂರು :ಸ್ವಾತಂತ್ರ್ಯ ಯೋಧ, ಸಮಾಜ ರತ್ನ, ಸಹಕಾರಿ ದುರೀಣ, ಕುಲಾಲ ಸಮುದಾಯದ ನೇತಾರ ದಿ. ಡಾ.ಆಮ್ಮೆಂಬಳ ಬಾಳಪ್ಪರ ಹೆಸರು ಅಜರಾಮರವಾಗಿಸುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ವಿಶೇಷ ಮನವಿಯ ಮೇರೆಗೆ ಮಂಗಳೂರು ನಗರದ ಪುರಭವನದ ಎದುರಿನ ಸೆಂಟ್ರಲ್ ರೈಲ್ವೆ ನಿಲ್ದಾಣಕ್ಕೆ ಹೋಗುವ ರಸ್ತೆಯನ್ನು "ಡಾ.ಅಮ್ಮೆಂಬಳ ಬಾಳಪ್ಪ ರಸ್ತೆ" ಎಂದು ನಾಮಕರಣ ಮಾಡಲು ಸರ್ಕಾರವು ಅನುಮೋದನೆ ನೀಡಿದ ಹಿನ್ನಲೆಯಲ್ಲಿ ಆ 10ರಂದು ನಡೆಯುವ ನಾಮಕರಣ ಫಲಕ ಅನಾವರಣ ಸಮಾರಂಭದ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಜು 28ರಂದು ಜಿಲ್ಲಾ ಮಾತೃ ಸಂಘದ ಕಚೇರಿಯಲ್ಲಿ, ನಡೆಯಿತು.
ಜಿಲ್ಲಾ ಮಾತೃ ಸಂಘದ ಅಧ್ಯಕ್ಷರಾದ ಮಯೂರ್ ಉಳ್ಳಾಲ್ ಮತ್ತು ಸಮಾಜ ಸೇವಾ ಸಹಕಾರಿ ಸಂಘ ಬಂಟ್ವಾಳ ಇದರ ಅಧ್ಯಕ್ಷರಾದ ಸುರೇಶ್ ಕುಲಾಲ್ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಕುಲಾಲ ಸಮುದಾಯದ ಎಲ್ಲರೂ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮಾತೃ ಸಂಘದ ಪ್ರಧಾನ ಕಾರ್ಯದರ್ಶಿ ಕುಶಲಪ್ಪ ಕುಲಾಲ್,
ಮುಡಿಪು ಕುಲಾಲ ಸಂಘದ ಅಧ್ಯಕ್ಷ ಪುಂಡರಿಕಾಕ್ಷ.ಯು, ವೀರನಾರಾಯಣ ದೇವಸ್ಥಾನ ಕುಲಶೇಖರ ಇದರ ಅಧ್ಯಕ್ಷರಾದ ಸುಂದರ ಕುಲಾಲ್, ದೇವಿ ದೇವಸ್ಥಾನದ ಅಧ್ಯಕ್ಷ ಸದಾಶಿವ ಕುಲಾಲ್, ಮಹಿಳಾ ಮಂಡಳಿಯ ಅದ್ಯಕ್ಷೆ ಮಮತ ಅಣ್ಣಯ್ಯ ಕುಲಾಲ್,ಸೇವಾ ದಳಪತಿ ಪ್ರದೀಪ್ ಅತ್ತವರ,ಮಾತೃ ಮಂಡಳಿಯ ಸದಸ್ಯರು, ವೀರನಾರಾಯಣ ದೇವಸ್ಥಾನದ ಸದಸ್ಯರು, ದೇವಿ ದೇವಸ್ಥಾನದ ಸದಸ್ಯರು ಮಹಿಳಾ ಮಂಡಳಿಯ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು














