ತುಂಬೆ : ಮಾ. 30ರಂದು ಶ್ರೀ ಶಾರದಾ ಸೇವಾ ಪ್ರತಿಷ್ಠಾನ (ರಿ.)ಅಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಕಣ್ಣು ಪರೀಕ್ಷಾ ಶಿಬಿರ. ರಜತ ಮಹೋತ್ಸವ ಆಚರಣಾ ಸಮಿತಿ ಪೂರ್ವಭಾವಿ ಸಮಾಲೋಚನಾ ಸಭೆ

Coastal Bulletin
ತುಂಬೆ : ಮಾ. 30ರಂದು ಶ್ರೀ ಶಾರದಾ ಸೇವಾ ಪ್ರತಿಷ್ಠಾನ (ರಿ.)ಅಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಕಣ್ಣು ಪರೀಕ್ಷಾ ಶಿಬಿರ. ರಜತ ಮಹೋತ್ಸವ ಆಚರಣಾ ಸಮಿತಿ ಪೂರ್ವಭಾವಿ ಸಮಾಲೋಚನಾ ಸಭೆ

ಬಂಟ್ವಾಳ :ಶ್ರೀ ಶಾರದಾ ಸೇವಾ ಪ್ರತಿಷ್ಠಾನ (ರಿ.) ಶ್ರೀ ರಾಮ ನಗರ,ತುಂಬೆ ಇದರ ಅಶ್ರಯದಲ್ಲಿ ಮಂಗಳಾ ಆಸ್ಪತ್ರೆ ಮತ್ತು ಕಿಡ್ನಿ ಪೌಂಡೇಶನ್ ಮಂಗಳೂರು ಇವರ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಕಣ್ಣು ಪರೀಕ್ಷಾ ಶಿಬಿರವು ಮಾ.30ನೇ ಆದಿತ್ಯವಾರ ಬೆಳಿಗ್ಗೆ ಗಂಟೆ 9-00ರಿಂದ 1-00ರ ತನಕ ತುಂಬೆ ಶ್ರೀ ಶಾರದಾ ಸಭಾಭವನದಲ್ಲಿ ನಡೆಯಲಿದೆ.

ಶ್ರೀ ಶಾರದಾ ಸೇವಾ ಪ್ರತಿಷ್ಠಾನ (ರಿ.)24ವರ್ಷ ಪೂರೈಸಿ ಬೆಳ್ಳಿ ಹಬ್ಬದ ಆಚರಣೆಯ ಸಂದರ್ಭದಲ್ಲಿ ರಜತ ಮಹೋತ್ಸವ ಆಚರಣಾ

ಸಮಿತಿ ಹಾಗೂ ವಿಸ್ತ್ರತ ಸಭಾಭವನ ನಿರ್ಮಾಣ ಸಲುವಾಗಿ ಪೂರ್ವಭಾವಿ ಸಮಾಲೋಚನಾ ಸಭೆಯನ್ನು ಕರೆಯಲಾಗಿದೆ ಎಂದು ಪ್ರ. ಕಾರ್ಯದರ್ಶಿ ಪ್ರವೀಣ್ ಬಿ ತುಂಬೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment