ಬಂಟ್ವಾಳ :ಕುಲಾಲ ಸಮುದಾಯ ಭವನದ ಅನುದಾನ ಕೋರಿ ಧರ್ಮಸ್ಥಳ ಕ್ಷೇತ್ರಕ್ಕೆ ಮನವಿ.

Coastal Bulletin
ಬಂಟ್ವಾಳ :ಕುಲಾಲ ಸಮುದಾಯ ಭವನದ ಅನುದಾನ ಕೋರಿ ಧರ್ಮಸ್ಥಳ ಕ್ಷೇತ್ರಕ್ಕೆ ಮನವಿ.

ಬಂಟ್ವಾಳ :ತಾಲೂಕು ಕುಲಾಲ ಸುಧಾರಕ ಸಂಘದ ಸಮುದಾಯ ಭವನದ ಮೇಲಂತಸ್ತಿನ ಕಟ್ಟಡದ ಕಾಮಗಾರಿಗೆ ಅನುದಾನ ಕೋರಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ವಿರೇಂದ್ರ ಹೆಗ್ಗಡೆಯವರಲ್ಲಿ ಸಂಘದ ಕಟ್ಟಡ ಸಮಿತಿಯ ಅಧ್ಯಕ್ಷರಾದ ಸುರೇಶ್ ಕುಮಾರ್ ನಾವುರೂ ಇವರ ಮುಂದಾಳತ್ವದಲ್ಲಿ ಮನವಿ ನೀಡಲಾಯಿತು.

ಈ ಸಂದರ್ಭದಲ್ಲಿ ಕಟ್ಟಡ ಸಮಿತಿಯ ಕಾರ್ಯದರ್ಶಿ ಸುಕುಮಾರ್ ಬಂಟ್ವಾಳ, ಸಂಘದ ನಿಕಟ ಪೂರ್ವ ಅಧ್ಯಕ್ಷರಾದ ನಾರಾಯಣ್ ಸಿ.ಪೆರ್ನೆ, ಮಾಜಿ ಪ್ರಧಾನ ಕಾರ್ಯದರ್ಶಿಗಳಾದ

ಲಕ್ಷ್ಮಣ್ ಕುಲಾಲ್ ಅಗ್ರಬೈಲು, ಮನೋಹರ ನೇರಂಬೋಳು, ಸಂಘದ ಸದಸ್ಯರಾದ ಪನೋಲಿ ಬೈಲು ಬಂಡಾರದ ಮನೆ ರಮೇಶ್ ಕುಲಾಲ್ ಹಾಗೂ ವಕೀಲರಾದ ಉಮಾಕರ್ ಉಪಸ್ಥಿತರಿದ್ದರು.

Leave a Comment