ತಮಿಳು ಚಿತ್ರರಂಗದ ಹಿರಿಯ ನಟ,ಡಿಎಂಡಿಕೆ ಪಕ್ಷದ ನಾಯಕ ವಿಜಯಕಾಂತ್ ಇನ್ನಿಲ್ಲ.

Coastal Bulletin
ತಮಿಳು ಚಿತ್ರರಂಗದ ಹಿರಿಯ ನಟ,ಡಿಎಂಡಿಕೆ ಪಕ್ಷದ ನಾಯಕ ವಿಜಯಕಾಂತ್ ಇನ್ನಿಲ್ಲ.

ಚೆನ್ನೈ: ತಮಿಳು ಚಿತ್ರರಂಗದ ಹಿರಿಯ ನಟ, ಡಿಎಂಡಿಕೆ ನಾಯಕ ವಿಜಯಕಾಂತ್ ಅವರು ಅಸೌಖ್ಯದಿಂದ ನಿಧನರಾಗಿದ್ದಾರೆ. ಕೋವಿಡ್‌ನಿಂದ ಬಳಲುತ್ತಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೋವಿಡ್ ನಂತರ ಅವರಿಗೆ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಅವರಿಗೆ 71 ವರ್ಷ ವಯಸ್ಸಾಗಿತ್ತು. ನಟ ವಿಜಯಕಾಂತ್ ನಿಧನಕ್ಕೆ ತಮಿಳು ಚಿತ್ರರಂಗದ ಗಣ್ಯರು, ರಾಜಕೀಯ ನಾಯಕರು, ಅಭಿಮಾನಿಗಳು ಶೋಕ ವ್ಯಕ್ತಪಡಿಸಿದ್ದಾರೆ.

1952ರಲ್ಲಿ ಆಗಸ್ಟ್ 25 ರಂದು ಜನಿಸಿದ ವಿಜಯಕಾಂತ್ ಮೂಲ ಹೆಸರು ನಾರಾಯಣ ವಿಜಯರಾಜ ಅಲಗರಸ್ವಾಮಿ, ಮುಂದೆ ವಿಜಯಕಾಂತ್‌ ಹೆಸರಿನಿಂದಲೇ ಫೇಮಸ್ ಆಗಿದ್ದರು.

2011ರಿಂದ 2016ರವರೆಗೆ ತಮಿಳುನಾಡು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿಯೂ ಕಾರ್ಯನಿರ್ವಹಿಸಿದ್ದರು. ಬರೀ ನಟನೆ ಮಾತ್ರವಲ್ಲದೇ ಸಿನಿಮಾ ನಿರ್ಮಾಣ, ನಿರ್ದೇಶನದಲ್ಲೂ ಕೆಲಸ ಮಾಡಿದ್ದರು.

Leave a Comment