ಕೊಡ್ಮಾಣ್: ಶ್ರೀ ಕೃಷ್ಣ ಲೀಲೋತ್ಸವ, ಮೊಸರು ಕುಡಿಕೆ ಸಂಭ್ರಮ. ಭವ್ಯ ಶೋಭಯಾತ್ರೆ, ಗಮನ ಸೆಳೆದ ಮೊಸರು ಕುಡಿಕೆ ಒಡೆಯುವ ದೃಶ್ಯ.

Coastal Bulletin
ಕೊಡ್ಮಾಣ್: ಶ್ರೀ ಕೃಷ್ಣ ಲೀಲೋತ್ಸವ, ಮೊಸರು ಕುಡಿಕೆ ಸಂಭ್ರಮ. ಭವ್ಯ ಶೋಭಯಾತ್ರೆ, ಗಮನ ಸೆಳೆದ ಮೊಸರು ಕುಡಿಕೆ ಒಡೆಯುವ ದೃಶ್ಯ.

ಬಂಟ್ವಾಳ :ಶ್ರೀ ಕೃಷ್ಣ ಜನ್ಮೋತ್ಸವ ಸಮಿತಿ ಕೊಡ್ಮಾಣ್ ಇವರ ಅಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಶ್ರೀ ಕೃಷ್ಣ ಲೀಲೋತ್ಸವ ಮೊಸರು ಕುಡಿಕೆ ಉತ್ಸವವು ಆ 27ರಂದು ಮಂಗಳವಾರ ಸಂಜೆ ಭವ್ಯ ಶೋಭಾಯಾತ್ರೆ ಸಹಿತ ವಿವಿಧ ಧಾರ್ಮಿಕ,ಸಂಸ್ಕೃತಿಕ ಕಾರ್ಯಕ್ರಮ ಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.

ಸಂಜೆ ನಡೆದ ಮೊಸರು ಕುಡಿಕೆ ಉತ್ಸವದ ಪ್ರಯುಕ್ತ ನಡೆದ ವಿವಿಧ ಸ್ಪರ್ಧೆಗಳ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಕಳ್ಳಿಗೆ ಗ್ರಾಂ ಪಂ ಸದಸ್ಯ ದಾಮೋದರ ನೆತ್ತರಕೆರೆ, ಭಜರಂಗದಳ ಜಿಲ್ಲಾ ಸಂಚಾಲಕ ಭರತ್ ಕುಮ್ದೇಲ್,ಉದ್ಯಮಿ ಗೋಪಾಲಕೃಷ್ಣ ಶೆಟ್ಟಿ ಕೊಡ್ಮಾಣ್, ಹಿರಿಯರಾದ ದೇವದಾಸ ಕೆ ಅರ್, ಸಮಿತಿ ಅಧ್ಯಕ್ಷ ಚೇತನ್ ಕಾಂಜಿಲಕೋಡಿ ಉಪಸ್ಥಿತರಿದ್ದರು.


ಶ್ರೀ ಕೃಷ್ಣ ದೇವರ ಮಹಾ ಪೂಜೆಯ ಬಳಿಕ ದೇವರನ್ನು ಪಲ್ಲಕಿಯಲ್ಲಿ ಕುಳ್ಳಿರಿಸಿ ಚೆಂಡೆ ಭಜನೆ ವಿವಿಧ ವಾದನಗಳ ಮೂಲಕ ನೆತ್ತರಕೆರೆ ತನಕ

ಭವ್ಯ ಶೋಭಾಯಾತ್ರೆ ನಡೆಯಿತು, ಬಳಿಕ ಮತ್ತೆ ಉತ್ಸವ ಸ್ಥಳಕ್ಕೆ ತಲುಪಿತು.ಮಕ್ಕಳು ಶ್ರೀ ಕೃಷ್ಣ ವೇಷದೊಂದಿಗೆ ಸಂಭ್ರಮ ಪಟ್ಟರು, ಮೆರವಣಿಗೆಯುದ್ದಕ್ಕೂ ಯುವಕರ ತಂಡವು ಪಿರಮಿಡ್ ರಚಿಸಿ ಮೊಸರು ಕುಡಿಕೆ ಒಡೆಯುವ ದೃಶ್ಯಗಳು ಗಮನ ಸೆಳೆದವು.

ಪ್ರಮುಖರಾದ ಸತೀಶ ನಾಯ್ಗ ಕೊಡ್ಮಾಣ್ ಕೊಡಿ, ಪದ್ಮನಾಭ ಶೆಟ್ಟಿ ಕೊಟ್ಟಿಂಜ,ಗೋಪಾಲ ಗೋವಿಂದೋಟ,ಸಂತೋಷ್ ಕೊಡ್ಮಾಣ್, ಹರೀಶ್ ಕಲ್ಲಜಾಲ್, ರವೀಂದ್ರ ನಾಯ್ಕ್ ಪೊನ್ನೊಡಿ,, ಸಂಜೀವ ಕೋಟ್ಯಾನ್ ಬೆಂಜನಪದವು, ಶುಭಕಿರಣ್ ಕೊಟ್ಟಾರಿ, ಪುರುಷೋತ್ತಮ್ ಆಳ್ವ ಹೊಯ್ಗೆಗದ್ದೆ, ಹರೀಶ್ ಕುಮಾರ್ ಕಾಂಜಿಲಕೊಡಿ, ಸಹಿತ ಪದಾಧಿಕಾರಿಗಳು ಹಾಗೂ ಭಗವಾದ್ಬಕ್ತರು ಶ್ರದ್ದಾ ಭಕ್ತಿಯಿಂದ ಭಾಗವಹಿಸಿದ್ದರು.

Leave a Comment